ರಾಯಚೂರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆಸಿ ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಎಸ್‌ಐಟಿ ತನಿಖೆ ಎದುರಿಸುತ್ತಿದ್ದು ಇದೀಗ ಬಂಧನಕ್ಕೆ ಮುಂದಾಗಿರುವ ಇಡಿ ಅಧಿಕಾರಿಗಳ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದು, ಇದೀಗ ರಾಯಚೂರಿ ನಲ್ಲಿ ಪ್ರತ್ಯಕ್ಷರಾಗಿ ಕಾರಿನಲ್ಲಿ ಒಟಾಟ ನಡೆಸಿದ್ದಾರೆ.
ಪ್ರಕಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ನಾಗೇಂದ್ರ ಅವರು ಜಾರಿ ನಿರ್ದೇಶನಾ ಲಯ ಅಧಿಕಾರಿಗಳು ಬಂಧಿಸಿದ್ದಾರೆ.
ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ರಾಯಚೂರಿನ ನಿವಾಸಿದಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಜಮೀನು ಖರೀದಿ ಸೇರಿದಂತೆ ಇತರೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ದದ್ದಲ್ ಸವರನ್ನು ಬಂಧಿಸಿದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿ ಗಳು ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕಣ್ತಪ್ಪಿಸಿ ಕೊಂಡು ಓಡಾಡುತ್ತಿದ್ದು ಇದೀಗ ರಾಯಚೂರಿ ನಲ್ಲಿ ಪ್ರತ್ಯೇಕರಾಗಿದ್ದಾರೆ.
ಇಡೀ ದಿನ ಜಾರಿ ನಿರ್ದೇಶನಾಲಯ ಅಧಿಕಾರಿ ಗಳ ಕೈಯಿಂದ ಪಾರಾಗಲು ಎಸ್‌ಐಟಿ ಮುಂದೆ ಕುಳಿತಿದ್ದ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಶುಕ್ರವಾರ ರಾತ್ರಿ ವಿಚಾ ರಣೆ ಮುಗಿದ ಕೂಡಲೇ ನಾಪತ್ತೆಯಾಗಿದ್ದರು. ರಾಯಚೂರಿನಲ್ಲಿ ಪತ್ತೆಯಾಗಿದ್ದು, ತಮ್ಮ ಮನೆಯಿಂದ ಮಂತ್ರಾಲಯದ ಕಡೆಗೆ ಪ್ರಯಾಣ ಬೆಳೆಸಿದ್ದು, ರಾಯರ ದರ್ಶನ ಪಡೆಯಲಿದ್ದಾರೆ.