ರಾಯಚೂರು,ಏ.೧- ನಗರದ ಸ್ಟೆಷನ ಏರಿಯಾ ಬಳಿಯ ಈಶ್ವರ ನಗರದ ನಿವಾಸಿ ವೀರೇಶ ಎಂಬ ಯುವಕನ ಸಾವಿಗೆ ಪಶ್ಮಿಮ ಠಾಣೆಯ ಪಿಎಸ್ ಐ ಮಂಜುನಾಥ ಇವರೇ ಕಾರಣವಾಗಿದ್ದು ಸೇವೆಯಿಂದ ಅಮಾನತ್ ಗೊಳಿಸಬೇಕೆಂದು ಒತ್ತಾಯಿಸಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ಮೃತ ವಿರೇಶಙಪತ್ನಿ ನೀಡಿದ ದೂರಿನ ಮೆರೆಗೆ ವಿಚಾರಣೆಗೆ ಕರೆದು ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿಗಳು ಹಲ್ಲೆ ನಡೆಸಿದ್ದರು.ಗಂಬೀರ ಗಾಯಗೊಂಡ ವಿರೇಶ ಚಿಕಿತ್ಸೆಗೆ ರಿಮ್ಸ್ ಅಸ್ಪತ್ತೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ವಿರೇಶ ಮೃತಪಟ್ಟಿದ್ದ. ಮೃತ ವಿರೇಶನ ಕುಟುಂಬದವರು ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.ಪೊಲೀಸರ ವಿರುದ್ದ ದೂರು ದಾಖಲಿಧೆ ಇರುವದನ್ನು ವಿರೋಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಮಂಜುನಾಥರ ಕರ್ತವ್ಯದ ಕುರಿತು ನಗರ ಶಾಸಕ ಎಸ್ಪಿ ಪುಟ್ಟ ಮಾದಯ್ಯ ಇವರೊಂದಿಗೆ ಚರ್ಚಿದರು. ಅದರೆ ಕ್ರಮಕ್ಕೆ ಮುಂದಾಗದೇ ಇರುವದರಿಂದ ಎಸ್ಪಿ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ಮುಂದುವರೆಸಿದ್ದಾರೆ.