ರಾಯಚೂರು. ಕುಡುಕನ್ನೊಬ್ಬ ಶಾಸಕ ಶಿವರಾಜ ಪಾಟೀಲ್ರಿಗೆ ಚಾಕುವಿನಿಂದ ಹಲ್ಲೆ ಮಾಡಲು ಹತ್ನಿಸಿರುವ ಘಟನೆ ನಗರದ ಗದ್ವಾಲ್ ರಸ್ತೆಯಆಂಜನೇಯ ದೇವಸ್ಥಾನದ ಬಳಿ ನಡೆದಿದೆ.
ಹಲ್ಲೆಗೆ ಯತ್ನಿಸಿದ ಕುಡುಕ ಚಾಂದಪಾಷ ಎಂದು ತಿಳಿದು ಬಂದಿದೆ.
ನಗರದ ಗದ್ವಾಲ್ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ ಪಾಟೀಲ್ ತೆರಳಿದ್ದರು, ಈ ವೇಳೆ ಚಾಂದಪಾಷಾ ಶಾಸಕ ಶಿವರಾಜ ಪಾಟೀಲ್ ಅವರ ಬಳಿ ಬಂದು ನಮ್ಮ ಮನೆಯಲ್ಲಿ ನಳ ಹಾಕಿಸಿಲ್ಲವೆಂದು ಹೇಳಿದ ನಂತರ ತನ್ನಲ್ಲಿದ್ದ 3-4 ಕತ್ತಿಗಳಿಂದ ಹಲ್ಲೆಗೆ ಯತ್ನಿಸಿದ ಎನ್ನಲಾಗಿದೆ.
ಸ್ಥಳದಲ್ಲಿದ್ದ ಅಂಗ ರಕ್ಷಕರು ತಡೆದಿದ್ದಾರೆ. ನಂತರ ಚಾಂದ್ಪಾಷಾ ನನ್ನು ನಗರದ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ವಿಚಾರಣೆ ಮಾಡುವ ಸಂದರ್ಭದಲ್ಲಿ ಹಲ್ಲೆ ಮಾಡಲು ಹೋಗಿಲ್ಲ ಮಾತನಾಡಲು ಹೋಗಿದ್ದೆ ಎಂದು ಹೇಳಿದ್ದಾನೆ.
ಈ ಕುರಿತು ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.