Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಜನರ ಆರ್ಥಿಕ ಸುಧಾರಣೆಯಾದರೆ ಸಾಮಾಜಿಕ ಸ್ಥಿತಿ ಸುಧಾರಣೆಯಾಗುತ್ತದೆ- ಸಂಸದ ಅಮರೇಶ್ವರ ನಾಯಕ

ಜನರ ಆರ್ಥಿಕ ಸುಧಾರಣೆಯಾದರೆ ಸಾಮಾಜಿಕ ಸ್ಥಿತಿ ಸುಧಾರಣೆಯಾಗುತ್ತದೆ- ಸಂಸದ ಅಮರೇಶ್ವರ ನಾಯಕ

ರಾಯಚೂರು. ಜನರ ಆರ್ಥಿಕ ಧಾರಣೆಯಾದರೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಸುಧಾರಣೆಯಾ ಗುತ್ತದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ, ಪುರಸಭೆ ಲಿಂಗಸುಗೂರು, ಮುದ್ಗಲ್, ದೇವದುರ್ಗ ಮಾನ್ವಿ ಮತ್ತು ಪಟ್ಟಣ ಪಂಚಾಯತಿ ಕವಿತಾರ, ಹಟ್ಟಿ ಸಂಯುಕ್ತ ಆಶ್ರಯದಲ್ಲಿ, ಹಮ್ಮಿಕೊಂಡ ಪ್ರಧಾನ ಮಂತ್ರಿ ಆತ್ಮ ನಿರ್ಧಾರ ನಿಧಿ ಯೋಜನೆಯ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ಯೋಜನೆ ಕುರಿತು ಜಾಗೃತಿ ಹಾಗೂ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಬೀದಿಬದಿ ವ್ಯಾಪಾರಿಗಳು ಕೋವಿಡ್ ಸಂದರ್ಭ ದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು, ಅವರಿಗಾಗಿಯೇ ಕೇಂದ್ರ ಸರ್ಕಾರ ಆತ್ಮ ನಿರ್ಭಾರ ಯೋಜನೆ ಜಾರಿಗೊಳಿಸಿದೆ ಎಂದರು‌.
ಅಧಿಕಾರಿಗಳು ಜನರಿಗೆ ಸೌಲಭ್ಯಗಳ ಬಗ್ಗೆ ಜಾಗೃತಿ ಗೊಳಿಸುವ ಕೆಲಸ ಮಾಡಬೇಕು,ಈ ಯೋಜನೆ ಜಾರಿಯಿಂದ ಬೀದಿಬದಿ ವ್ಯಾಪಾರಿ ಗಳಿಗೆ ಉಪಯೋಗವಾಗಬೇಕು, ಮೊದಲ ಹಂತದಲ್ಲಿ 10 ಸಾವಿರ ಸಾಲ ಸೌಲಭ್ಯ, ಮತ್ತು 2ನೇ ಹಂತದಲ್ಲಿ 20 ಸಾವಿರ ಹಾಗೂ 3ನೇ ಹಂತದಲ್ಲಿ 50 ಸಾವಿರ ಹೆಚ್ಚು ನೀಡುತ್ತದೆ,
ಈ ಅನುದಾನವು ಸಣ್ಣ ಪುಟ್ಟ ವ್ಯಾಪಾರಿಗಳು ಪಡೆದುಕೊಂಡು ಸ್ವಯಂ ಉದ್ಯೋಗ ಮಾಡಿಕೊಳ್ಳುವ ಮೂಲಕ ತಮ್ಮ ಜೀವನ ಸುಧಾರಣೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಾಲ ವಿತರಣೆಯಿಂದ ಒಂದು ಲಕ್ಷ ಭೌತಿಕ‌ ಗುರಿ ಇದೆ. ಜಿಲ್ಲೆಯಲ್ಲಿ 6 ಸಾವಿರ ಗುರಿ ಇದ್ದು, 8 ಸಾವಿ ರ ಗುರಿ ಸಾಧಿಸಿದೆ, ಶೇ ‌2 ರಷ್ಟು ಹೆಚ್ಚಳವಾಗಿದೆ ಎಂದ ಅವರು, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿ ನೀಡುತ್ತಿದ್ದು ಮತ್ತೆ ಅ ಯೋಜನೆ ಮುಂದುವರೆಸಲಿದ್ದಾರೆ, ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ, ಇದರಿಂದ ಕರ ಕುಶಲ ಕರ್ಮಿಗಳಿಗೆ ಅನುಕೂಲವಾಗಲಿದೆ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅಭಿವೃದ್ಧಿ ಗೆ‌ ಸ್ವಯಂ ಉದ್ಯೋಗಕ್ಕೆ ಆಸರೆಯಾಗಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕರಕುಶಲ ಮಾಡುವವರ ಸಂಖ್ಯೆ ಕಡಿಮೆಯಾಗಿದೆ, ಜನರು ನಗರಕ್ಕೆ ಬಂದು ಕೆಲಸ ಮಾಡಬೇಕಾಗದೆ, ಈ ಯೋಜನೆಯಿಂದ ನಗರಕ್ಕೆ ಬರುವುದು ನಿವಾರಣೆಯಾಗಲಿದೆ. ಬಡಿಗೆ ತಯಾರಿಕೆ ,ಕಮ್ಮಾರಿಕೆ, ಸೇರಿದಂತೆ 8 ಕುಶಲಕರ್ಮಿ ಕೆಲಸಗಳು ಗ್ರಾಮಗಳಲ್ಲಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹಿಬೂಬ್ ಜಿಲಾನಿ ಜಿಲ್ಲೆಯಲ್ಲಿ ಆತ್ಮ ನಿರ್ಭಾರ ಯೋಜನೆಗೆ 10 ಸಾವಿರ ಮೊದಲ ಹಂತದಲ್ಲಿ 5557 ಬೌತಿಕ ಗುರಿಯಲ್ಲಿ 7203 ಜನರಿಗೆ ಸಾಲ ವಿತರಣೆ ಮಾಡಿದೆ, 20 ಸಾವಿರ ರೂ 2ನೇ ಹಂತದಲ್ಲಿ 3580 ಬೌತಿಕ ಗುರಿಯಲ್ಲಿ 3444 ಸಾಲ ವಿತರಣೆ ಮಾಡಿದೆ, 50 ಸಾವಿರ 3ನೇ ಹಂತದಲ್ಲಿ 682 ಬೌತಿಕ ಗುರಿಯಲ್ಲಿ 531 ಜನರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಲ ಸೌಲಭ್ಯ ಪಡೆದ ಫಲಾನುಭವಿಗಳು 12 ಕಂತುಗಳಲ್ಲಿ ಮರು ಪಾವತಿಸಿದ್ದಲ್ಲಿ ಹೆಚ್ಚುವರಿ ಸಾಲಸೌಲಭ್ಯ ಒದಗಿಸಿಕೊಡಲಾಗುತ್ತದೆ, ಹಾಗೂ ಮುಂದಿನ ಮುದ್ರಾ ಯೋಜನೆಗೆ ಪರಿಗಣಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸು ವುದು ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ, ನಗರಾಭಿವೃದ್ಧಿ ಕೋಶ ಅಧಿಕಾರಿ ಜಗದೀಶ ಗಂಗಣ್ಣವರ್, ನಗರಸಭೆ ಪೌರಾಯಕ್ತ ಗುರುಸಿದ್ದಯ್ಯ ಹಿರೇಮಠ, ಕೈಗಾರಿಕೆ ಇಲಾಖೆ ಅಧಿಕಾರಿ ಬಸವರಾಜ, ಮಾನವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಲೀಡ್ ಬ್ಯಾಂಕ್ ಮ್ಯಾನೇಜರ್ ರವಿ, ಮುದಗಲ್ ಪುರಸಭೆ ಮುಖ್ಯಾಧಿಕಾರಿ ನಹೀಮ್ ಸೇರಿದಂತೆ ಅಧಿಕಾರಿಗಳು, ಫಲಾನುಭವಿಗಳು ಭಾಗವಹಿಸಿದ್ದರು.

Megha News