ರಾಯಚೂರು.ರಾಯಚೂರಿಗೆ ಶೀಘ್ರ ಏಮ್ಸ್ ಘೋಷಣೆ ಮಾಡುವ ಬಗ್ಗೆ ಈ ದಿನ ರಾಜಾ ಅಮರೇಶ್ವರ ನಾಯಕ, ಲೋಕಸಭಾ ಸದಸ್ಯರು,ರಾಯಚೂರು ಕ್ಷೇತ್ರ ಹಾಗೂ ಸಂಗಣ್ಣ ಕರಡಿ ಲೋಕಸಭಾ ಸದಸ್ಯರು ಕೊಪ್ಪಳ ಕ್ಷೇತ್ರ ಇಬ್ಬರೂ ಸೇರಿ ಡಾ. ಮನ್ಸುಕ್ ಎಲ್. ಮಾಂಡವಿಯ, ಮಾನ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಪಾರ್ಲಿಮೆಂಟಿನಲ್ಲಿ ಭೇಟಿ ಮಾಡಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಮೊದಲಿನಿಂದಲೂ ತಮಗೂ ಹಾಗೂ ಪ್ರಧಾನ ಮಂತ್ರಿಗಳ ವರೆಗೆ ವಿನಂತಿಸಿಕೊಳ್ಳುತ್ತಿದೆ.
ರಾಯಚೂರು ಜಿಲ್ಲೆಯು ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಮಹಾತ್ವಾಕಾಂಕ್ಷಿ ಜಿಲ್ಲೆ ಎಂದು ಸಹ ಕೇಂದ್ರ ಸರ್ಕಾರದಿಂದ ಘೋಷಣೆ ಆಗಿರುತ್ತದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಬೇಕಾಗುವ ಎಲ್ಲಾ ಮೂಲಸೌಕರ್ಯಗಳು ಲಭ್ಯವಿರುತ್ತವೆ. ರಾಯಚೂರಿನಲ್ಲಿ ಏಮ್ಸ್ ಹೋರಾಟ ಸಮಿತಿಯು ಈಗಾಗಲೇ ಸುಮಾರು 638 ದಿನಗಳಿಂದ ನಿರಂತರ ಧರಣಿಯನ್ನು ಶಾಂತ ರೀತಿಯಿಂದ ನಡೆಸುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗಳು ರಾಯಚೂರುನಲ್ಲಿಯೇ ಏಮ್ಸ್ ಸ್ಥಾಪನೆಗೆ ಒಪ್ಪಿ ಪತ್ರ ಬರೆದಿರುವ ವಿಷಯವನ್ನು ಸಹ ಮಾನ್ಯ ಕೇಂದ್ರ ಸಚಿವರ ಗಮನಕ್ಕೆ ತಂದರು. ಕೇಂದ್ರ ಆರೋಗ್ಯ ಸಚಿವರು ಮಾತನಾಡಿ ಶೀಘ್ರ ರಾಯಚೂರಿಗೆ ಒಂದು ಅಧ್ಯಯನ ತಂಡವನ್ನು ಕಳಿಸುವುದಾಗಿ ಹಾಗೂ ಸದರಿ ತಂಡದಿಂದ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಇಬ್ಬರು ಸಂಸದರಿಗೆ ಭರವಸೆಯನ್ನು ನೀಡಿರುವರು.