ರಾಯಚೂರು. ದಸರಾ ಹಬ್ಬ ಆಚರಣೆ ಕುರಿತು ಪೂರ್ವಭಾವಿ ಸಿದ್ದತಾ ಸಭೆಗೆ ಹಾಜರಾಗಲು ನಗರಸಭೆಯಿಂದ ಸೂಚನಾ ಪತ್ರವನ್ನು ಕಳುಹಿಸಲಾಗಿದೆ ಆದರೆ ಸೂಚನಾ ಪತ್ರದಲ್ಲಿ ದಿನಾಂಕ ಮಾತ್ರ ಬದಲಾಗಿ ಮಾಡಿ ಸೂಚನಾ ಪತ್ರದಲ್ಲಿರುವ ಹೆಸರುಗಳನ್ನು ಬದಲಾವಣೆ ಮಾಡುವಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸಿದೆ.
ನಗರದ ನಗರಸಭೆ ಸಭೆ ಕಚೇರಿ ಸಭಾಂಗಣದಲ್ಲಿ ಪ್ರತಿ ವರ್ಷವೂ ದಸರಾ ಹಬ್ಬ ಆಚರಣೆ ಕುರಿತು ಸಭೆ ಕರೆದು ಅಭಿಪ್ರಾಯ ಪಡೆದುಕೊಂಡು ಅದರ ಮೇರೆಗೆ ಹಬ್ಬ ಆಚರಣೆಗೆ ಸಿದ್ದತೆ ಕೈಗೊಳ್ಳಲಾಗುತ್ತದೆ.
ಈ ವರ್ಷವೂ ಸಹ ದಸರಾ ಹಬ್ಬದ ಆಚರಣೆಗೆ ನಗರಸಭೆಯು ಅ.16 ರಂದು ವಿವಿಧ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳಿಗೆ, ಸಂಘಟನೆಗಳ ಮುಖಂಡರಿಗೆ ಮಾಹಿತಿ ನೀಡಿ ಸಭೆ ಆಹ್ವಾನ ನೀಡಲಿ ಮಾಹಿತಿ ಪತ್ರ ಕಳುಹಿಸಲಾಗಿದೆ ಆದರೆ ಸೂಚನಾ ಪತ್ರವನ್ನು ಕಾಟಾಚಾರಕ್ಕೆ ಎಂಬಂತೆ ಹಳೆಯ ಸೂಚನಾ ಪತ್ರದಲ್ಲಿಯೇ ಹಳೆಯ ದಿನಾಂಕ ಬದಲಿಸಿ ಹೊಸ ದಿನಾಂಕ ನಮೂದಿಸಿದ್ದಾರೆ, ಆದರೆ ಹೆಸರುಗಳಲ್ಲಿ ಬದಲಾವಣೆ ಮಾಡಿಲ್ಲ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದನ ಅಧ್ಯಕ್ಷರ ಬಸವ ಪ್ರಭು ಪಾಟೀಲ್ ಬೆಟ್ಟದೂರು ಅವರ ಹೆಸರನ್ನು ಬದಲಾವಣೆ ಮಾಡಿ ಈಗಿರುವ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರ ಹೆಸರು ನಮೂದಿಸಬೇಕು, ಆದರೆ ಸೂಚನಾ ಪತ್ರದಲ್ಲಿ ಹೆಸರು ಬದಲಾವಣೆ ಮಾಡಿಲ್ಲ,
ಬಾರ್ ಅಸೋಸಿಯೇಷನ್ ಅಧ್ಯಕ್ಷ ಹೆಸರೂ ಸಹ ಬದಲಾವಣೆ ಮಾಡಿಲ್ಲ, ಈ ಹಿಂದೆ ಜಿ.ಬಸವ ರಾಜ ಇದ್ದು, ಅವರು ಬದಲಾವಣೆಯಾಗಿ ಇದೀಗ ಭಾನು ರಾಜ ವಕೀಲ ಅವರ ಹೆಸರನ್ನು ನಮೂದಿಸಬೇಕು, ಕೇಲವ ಕಾಟಾಚಾರಕ್ಕೆ ಎಂಬಂತೆ ಸಭೆಯನ್ನು ತಡವಾಗಿ ಕರೆಯಲಾಗಿದೆ ಎಂದು ಸಭೆಯಲ್ಲಿ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಪೌರಾಯಕ್ತರು ಮುಂದಿನ ಬಾರಿ ಇಂತಹ ತಪ್ಪುಗಳು ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಮಾಜಿ ಸದಸ್ಯರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಹಾಗೂ ದರೂರ ಬಸವರಾಜ, ಶಶಿರಾಜ, ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕೋಟೆ ಅಧ್ಯಯನ ಸಮಿತಿಯ ಹಫಿಜುಲ್ಲಾ, ಹಿರಿಯ ಸಾಹಿತಿ ದಾನಮ್ಮ, ಆಂಜನೇಯ ಜಾಲಿಬೆಂಚಿ, ರಾಮಣ್ಣ ಹವಳೆ, ಹೆಚ್ ಹೆಚ್ ಮ್ಯಾದರ್, ಶರಣಪ್ಪ ಗೋನಾಳ, ದಂಡಪ್ಪ ಬಿರಾದಾರ, ಶರಣಪ್ಪ ಗೋನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.