ರಾಯಚೂರು- ಮುಂಗಾರು ನಂತರ ನವರಾತ್ರಿ ಹಬ್ಬದ ಹರಿದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ವೈಭವಕರಣದಿಂದ ಆಯೋಜನೆ ಮಾಡುವ ಮೂಲಕ ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಮುಂಚೂಣಿತ್ವವನ್ನು ವಹಿಸಿಕೊಳ್ಳುತ್ತಿದೆ ಎಂದು ಬಾಲಂಕು ಆಸ್ಪತ್ರೆ ಡಾ.ಶ್ರೀಧರ್ ರೆಡ್ಡಿ ಅವರು ಹೇಳಿದರು.
ಅವರಿಂದು ನಗರದ ಗಾದ್ವಲ್ ರಸ್ತೆಯ ಮುನ್ನೂರುಕಾಪು ಸಮಾಜ ಮಾತಾ ಲಕ್ಷ್ಮಮ್ಮ ದೇವಿ ಹಾಗೂ ಕಾಳಿಕಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ ಆರನೇ ದಿನದ ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ವೈಭವಕರಣದಿಂದ ಆಯೋಜನೆ ಮಾಡುವ ಮೂಲಕ ಗ್ರಾಮೀಣ ಕ್ರೀಡೆ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವಂತ ಉಳಿಯುವಂತೆ ಮಾಡಿದ ಕೀರ್ತಿ ಮುನ್ನೂರು ಕಾಪು ಸಮಾಜ ಸಲ್ಲುತ್ತದೆ ಎಂದರು. ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅತ್ಯಂತ ಅದ್ದೂರಿಯಾಗಿ ಪ್ರಸ್ತುತ ಕಾಲಮಾನದಲ್ಲಿ ಜನರು ಟಿವಿ, ಸಿನಿಮಾ ವೀಕ್ಷಣೆಯಲ್ಲಿ ನಿರಿತರಾಗಿದ್ದು, ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವ ಕಳೆದುಕೊಳ್ಳುವಂತಾಗಿದೆ ಮತ್ತು ಪ್ರತಿಭೆಗಳಿಗೆ ವೇದಿಕೆ ಇಲ್ಲದಂತಾಗಿದೆ ಆದರೆ, ಮುನ್ನೂರುಕಾಪು ಸಮಾಜ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಮತ್ತೇ ಸಾಂಸ್ಕೃತಿಕ ವೈಭವಕ್ಕೆ ಮಹತ್ವ ದೊರೆಯುವಂತೆ ಮಾಡುವುದರ ಮೂಲಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದರು.
ಮುನ್ನೂರುಕಾಪು ಸಮಾಜ ಲಕ್ಷಾಂತರ ರೂ.ವೆಚ್ಚಮಾಡಿ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸುತ್ತಿವೆ. ಈ ರೀತಿಯ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದರು. ಮುನ್ನೂರುಕಾಪು ಸಮಾಜ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಯಲ್ಲಿ ಅಭಿವೃದ್ಧಿ ಹೊಂದಿದೆ.ಶ್ರೀ ಲಕ್ಷ್ಮಮ್ಮದೇವಿ ಕಾಳಿಕಾದೇವಿ ಆಶೀರ್ವಾದ, ಶ್ರೀಕೃಷ್ಣದೇವರಾಯರಂತ ಮಹಾನ್ ವ್ಯಕ್ತಿಗಳು
ಈ ಸಮಾಜದಲ್ಲಿ ಜನಿಸಿದ ಕೃಪೆಯಿಂದ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗಿದೆ.
ಸಾಹಿತ್ಯ, ನೃತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿವ ಮೂಲಕ ಮುನ್ನೂರು ಕಾಪು ಸಮಾಜದ ನವರಾತ್ರಿ ಕಾರ್ಯಕ್ರಮ ನಿರ್ವಹಿಸುತ್ತಿರುವುದು ಈ ಭಾಗಕ್ಕೆ ಹೆಚ್ಚಿನ ಮೆರಗು ತರುತ್ತಿದೆ ಜನ ಮನದಲ್ಲಿ ಉಳಿಯುವಂತೆ ಅದ್ದೂರಿಯಾಗಿ ಆಚರಣೆ ಮಾಡುತ್ತಿದ.
ಈ ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ವಹಿಸಿದ
ಸುದ್ದಿಮೂಲ ಸಂಪಾದಕರಾದ ಬಸವರಾಜ ಸ್ವಾಮಿ ಅವರು ಮಾತನಾಡಿ, ಎ. ಪಾಪಾರೆಡ್ಡಿ ಎಂದೆಂದಿಗೂ ಜಿಲ್ಲೆಯ ಐಕಾನ್ ಲೆಜೆಂಡ್, ಮುನ್ನೂರು ಕಾಪು ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಜೆಡಿಎಸ್ ಮುಖಂಡಮಹಾಂತೇಶ್ ಪಾಟೀಲ್ ಮಾತನಾಡಿ, ಕಳೆದ 25 ವರ್ಷ ಗಳಲ್ಲಿ ಜಿಲ್ಲೆಯಲ್ಲಿ ಅನೇಕ ಬದಲಾವಣೆ ಕಂಡು ಬಂದಿದ್ದು ಅದರಲ್ಲಿ ಪ್ರಮುಖವಾಗಿ ಮುನ್ನೂರು ಕಾಪು ಸಮಾಜ ಕಾರಹುಣ್ಣಿಮೆ ಅಂಗವಾಗಿ ಆಯೋಜಿಸುವ ಗ್ರಾಮೀಣ ಕ್ರೀಡೆಗಳ ಮೂಲಕ ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ವೈಭವಕರಣದಿಂದ ಆಚರಣೆ ಮಾಡುತ್ತಿದೆ.ಮುನ್ನೂರು ಕಾಪು ಸಮಾಜ ಪ್ರೇರಣೆಯಿಂದ ಪ್ರತಿಯೊಬ್ಬ ರೈತರು ಎತ್ತುಗಳನ್ನು ಸಾಕುವಂತೆ ಮಾಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಶಾಸಕ ಎ. ಪಾಪಾರೆಡ್ಡಿ ಅವರು ಕಲಾವಿದರ ಬೆಳೆಸುವಲ್ಲಿ ಮುಂಚೂಣಿತ್ವ ವಹಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಯಾಣ ಸತ್ಯ ಪತ್ರಿಕೆಯ ಸಂಪಾದಕರಾದ ಕೆ. ಸತ್ಯನಾರಾಯಣ ಮಾತನಾಡಿ, ಸಾಂಸ್ಕೃತಿಕ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಹೊಸ ಟ್ರೆಂಡ್ ಸೃಷ್ಟಿಸುವಲ್ಲಿ ಜಿಲ್ಲೆಯಲ್ಲಿ ಮೊದಲಿಗರು,ಹೊಸ ಕಲೆ ಹಿನ್ನಲೆ ಪಾಪಾರೆಡ್ಡಿ ಅವರಿಗೆ ರಾಷ್ಟ್ರಮಟ್ಟದ ಐಕಾನ್ ಲೆಜೆಂಡ್ ಪ್ರಶಸ್ತಿ ಭಾಜನರಾಗುವಂತೆ ಮಾಡಿದೆ. ಪಾಪಾರೆಡ್ಡಿ ಅವರು ಛಲಗಾರ ಹಿಡಿದ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವ ಮೂಲಕ ಜನಮನ್ನಣೆ ದೊರೆಯುವಂತೆ ಮಾಡುತ್ತಿದೆ ಎಂದರು.ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ್ನಣೆ ಹೇಗೆ ದೊರೆಯುತ್ತಿದೆ ಎಂಬುದು ಈ ಸಮಾಜ ಉತ್ತಮ ನಿರ್ದೇಶನವಾಗಿದೆ ಎಂದರು.ಮುಂಗಾರು ನಂತರ ನವರಾತ್ರಿ ಕಾರ್ಯಕ್ರಮಗಳನ್ನು ಅತ್ಯಂತ ಅದ್ದೂರಿಯಾಗಿ ನಿರ್ವಹಿಸುವ ಮೂಲಕ ಮುನ್ನೂರು ಕಾಪು ಸಮಾಜ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದರು.
ಎ. ಪಾಪಾರೆಡ್ಡಿ ಅವರು ಸಮಾಜವನ್ನು ಅಭಿವೃದ್ಧಿಯಲ್ಲಿ ಮುಂದೆ ತರುವುದರ ಮೂಲಕ ಸಮಾಜವನ್ನು ಬಲಿಷ್ಠವನ್ನಾಗಿ ಸಮಾಜವಾಗಿ ಗುರುತಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ಎ. ಪಾಪಾರೆಡ್ಡಿ ಅವರು ನವರಾತ್ರಿ ಉತ್ಸವಕ್ಕೆ ಮೆರುಗು ತಂದಿದ್ದಾರೆ.
ಮುರುಳಿಧರ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.ನಾಗರಾಜ ರೆಡ್ಡಿ ಅವರು ಸ್ವಾಗತಿಸಿದರು. ಸುಮಾರು 3 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಅದ್ಬುತ ನೃತ್ಯ ಪ್ರದರ್ಶನ ನೀಡಿದರು.
ಸ್ಪರ್ಧೆ ನಿರ್ಣಾಯಕರಾಗಿ ಶಾಂತ ಕುಲಕರ್ಣಿ ಅವರು ವಹಿಸಿದ್ದರು.ಕಾರ್ಯಕ್ರಮದ ಉಪನ್ಯಾಸಕಾರಾಗಿ ವಸುಂದರಾ ಪಾಟೀಲ್ ಅವರು ನವರಾತ್ರಿ ಕಾರ್ಯಕ್ರಮದ ಸುವಿಸ್ತರವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನವರಾತ್ರಿ ಉತ್ಸವ ರೂವಾರಿ ಮಾಜಿ ಶಾಸಕ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಎ. ಪಾಪಾರೆಡ್ಡಿ,
ಯು ಉಟ್ಕೂರು ಕೃಷ್ಣಮೂರ್ತಿ,ಗಾಧರ ಬೆಟ್ಟಪ್ಪ, ಬುಡತಪ್ಪಗಾರು ರಾಘವೇಂದ್ರ, ಜಿ. ಟಿ ರೆಡ್ಡಿ, ರಾಜಕುಮಾರ, ಪಾಳ್ಯಂ ಮಲ್ಲೇಶ,
ಸುದ್ದಿ ಮೂಲ ಪತ್ರಿಕೆ ಹಿರಿಯ ವರದಿಗಾರ ವೆಂಕಟೇಶ್ ಸಿಂಗ್, ಮುನ್ನೂರು ಕಾಪು ಸಮಾಜ ಹಿರಿಯ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರ