ರಾಯಚೂರು, ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡುವುದರ ಮೂಲಕ ಎಲ್ಲ ರಂಗಗಳಲ್ಲಿ ಮುಂಚೂಣಿತ್ವ ವಹಿಸಿಕೊಳ್ಳುತ್ತದೆ ಎಂದು ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ರವಿರಾಜನ್ ಅವರು ಹೇಳಿದರು.
ಅವರಿಂದು ನಗರದ ಗದ್ವಾಲ್ ರಸ್ತೆಯಲ್ಲಿರುವ ಶ್ರೀಮಾತಾ ಲಕ್ಷ್ಮಮ್ಮ ದೇವಿ ಹಾಗೂ ಶ್ರೀಕಾಳಿಕಾದೇವಿಯ ದೇವಸ್ಥಾನದಲ್ಲಿ ಮುನ್ನೂರು ಕಾಪು ಸಮಾಜ ಹಮ್ಮಿಕೊಂಡಿರುವ ನವರಾತ್ರಿ ಉತ್ಸವದ ಎಂಟನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಬಲ ಬಾರಿಸುವುದರ ಉದ್ಘಾಟಿಸಿ ಮಾತನಾಡುತ್ತಾ, ನಾವು ಸಂಸ್ಕೃತಿಯನ್ನು ಹೇಗೆ ನಡೆಸಬೇಕು ಎಂದು ಮಾತನಾಡುತ್ತಿದ್ದೇವೆ ಆದರೆ ಮುನ್ನೂರು ಕಾಪು ಸಮಾಜ ಆಚರಣೆ ಮೂಲಕ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜನರಿಗೆ ತೋರುಸುತ್ತಿದೆ.
ಮುನ್ನೂರು ಕಾಪು ಸಮಾಜ ಮಾದರಿಯಲ್ಲಿ ಎಲ್ಲ ಸಮುದಾಯದಗಳು ಅದ್ಬುತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆಯನ್ನು ರಕ್ಷಣೆ ಮಾಡಬೇಕು ಎಂದರು.ಎ. ಪಾಪಾರೆಡ್ಡಿ ಅವರು ಒಬ್ಬ ಕಬ್ಬಡಿ ಆಟಗಾರ ಕ್ರೀಡೆಯಲ್ಲಿ ಹೆಚ್ಜಿನ ಮಹತ್ವ ನೀಡುತ್ತಿದ್ದರು.ನಾನು ಮತ್ತು ಪಾಪಾರೆಡ್ಡಿ ಅವರು ಬಾಲ್ಯದ ಸ್ನೇಹಿತರು. ತಮ್ಮ ಶಾಲೆಯ ದಿನದಲ್ಲಿ ಬಾಲ್ಯ ಜೀವನ ಹಳೆಯ ನೆನೆಪುಗಳನ್ನು ಮೆಲಕು ಹಾಕಿ ತಮ್ಮ ಬಾಲ್ಯದ ಸ್ನೇಹದ ಬಗ್ಗೆ ಕೊಂಡಾಡಿದರು.ಮೈಸೂರು ಉತ್ಸವದಂತೆ ದಸರಾ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ನಡೆಸಲಾಗುತ್ತದೆ.
ಕೃಷಿ ಅವಲಂಬಿತ ಮುನ್ನೂರು ಕಾಪು ಸಮಾಜ ಇಂದು ಬಲಿಷ್ಠ ಸಮಾಜವಾಗಿ ಗುರುತಿಸಿಕೊಂಡು ಈಗ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡುವುದರ ಮೂಲಕ ಎಲ್ಲ ರಂಗಗಳಲ್ಲಿ ಮುಂಚೂಣಿತ್ವ ವಹಿಸಿಕೊಳ್ಳುತ್ತದೆ ಎಂದರು.
ಮುನ್ನೂರು ಕಾಪು ಸಮಾಜ ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಬಲಿಷ್ಠವಾಗಿದೆ ಎಂದರು.
ಭಾರತ ಸಂಸ್ಕೃತ ಪರಂಪರೆಯನ್ನು ಹೊಂದಿದ ದೇಶ ನಮ್ಮ ಸಾಂಸ್ಕೃತಿಕ ಪರಂಪರೆ ರಕ್ಷಣೆಯಲ್ಲಿ ಮುನ್ನೂರು ಕಾಪು ಮುಂಚೂಣಿಯಲ್ಲಿದೆ ಎಂದರು
ಮಾಜಿ ಶಾಸಕ ಎಪಾಪಾರೆಡ್ಡಿ ಅವರ ನೇತೃತ್ವದಲ್ಲಿ ಮುನ್ನೂರುಕಾಪು ಸಮಾಜದ ಸಮಸ್ತ ನಾಯರರು ಸಾಂಸ್ಕೃತಿಕ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನಿರಂತರ ಶ್ರಮ, ಇತರೆ ಸಮಾಜಗಳಿಗೆ ಮಾದರಿಯಾಗಿದೆ. ಹುಟ್ಟು, ಸಾವು ಎನ್ನುವುದು ನಮ್ಮ ಕೈಯಲ್ಲಿಲ್ಲ. ಬದುಕುವುದು ಮಾತ್ರ ನಮ್ಮ ಕೈಯಲ್ಲಿದೆ. ನಾವು ಯಾವ ರೀತಿ ಬದುಕಬೇಕು ಎನ್ನುವುದು
ಅತ್ಯಂತ ಪ್ರಮುಖವಾಗಿದೆ.
ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ ಎಂದು ಅರಿತುಕೊಂಡುಬದುಕಬೇಕು ಎಂದ ಅವರು, ಮುನ್ನೂರು ಕಾಪು ಸಮಾಜ ಮಾಡುತ್ತಿರುವ ಕಾರ್ಯಗಳಿಂದ ಸಾಂಸ್ಕೃತಿಕ ಪ್ರತಿಭೆಗಳಿಗೆ
ವೇದಿಕೆ ದೊರೆತಂತಾಗಿದೆ.
ಜಯವಂತರಾಜ್ ಪತಂಗಿ ಅವರು ಮಾತನಾಡಿ, ಎ. ಪಾಪಾರೆಡ್ಡಿ ಅವರು ಹಬ್ಬದ ಹರಿದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದಾಖಲೆ ಬರೆದಿದ್ದಾರೆ ಎಂದರು. ರಾಷ್ಟ್ರೀಯ ಅಧ್ಯಕ್ಷ ಆಗಬಹುದು ಆದರೆ ಸಮಾಜವನ್ನು ಕಟ್ಟುವುದು ಮತ್ತು ಸುಲಭವಲ್ಲ, ಆದರೆ ಪಾಪಾರೆಡ್ಡಿ ಅವರು ಸಾಮಾಜಿಕ ಆರ್ಥಿಕ ರಾಜಕೀಯವಾಗಿ ಬಲಿಷ್ಠಗೊಳಿಸಿದ್ದಾರೆ ಎಂದರು.
ಮುಖ್ಯ ಅತಿಥಿ ಆಗಮಿಸಿದ ಮಾಜಿ ವಿಧಾನಪರಿಷತ್ ಮಾಜಿ ಸದಸ್ಯ
ಎನ್ ಶಂಕ್ರಪ್ಪ ಅವರು ಮಾತನಾಡಿ, ಎ. ಪಾಪಾರೆಡ್ಡಿ ಮತ್ತು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಅವರ ನೇತೃತ್ವದಲ್ಲಿ ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ.ಮುನ್ನೂರು ಕಾಪು ಸಮಾಜದ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮ ಹಿಂದೂ ಧರ್ಮದ ಬಹುದೊಡ್ಡ ಕಾರ್ಯಕ್ರಮ ಎಂದು ಹೇಳುವುದು ತಪ್ಪಾಗಲಾರದು, ಪ್ರತಿಯೊಬ್ಬರು ಹಿಂದೂ ಧರ್ಮವನ್ನು ಕಟ್ಟಿ ಬೆಳಸಬೇಕು ಆದರೆ ಹಬ್ಬದ ಹರಿದಿನಗಳಲ್ಲಿ ಮುನ್ನೂರು ಕಾಪು ಸಮಾಜದ ಮಾದರಿಯಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದರು. ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಸಂಸ್ಕೃತಿಯನ್ನು ಜಿಲ್ಲೆಯ ಜನರಿಗೆ ಸಾರುತ್ತಿದ್ದಾರೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದಂತಹ ರಾಮಣ್ಣ ಹಾವಳೆ ಮಾತನಾಡುತ್ತಾ,ರೂಪದ ಮದ, ಯೌವ್ವನದ ಮದ, ವಿದ್ಯೆಯ ಮದ ಈ ಮರಗಳೇ ಸಾಕು ಮನುಷ್ಯನ ಅವನತಿಗೆ ನಮ್ಮೊಳಗಿರುವ ರಾಕ್ಷಸರನ್ನು ಸಂಹಾರ ಮಾಡಿದರೆ ಅದೇ ವಿಜಯದಶಮಿ, ನಮ್ಮ ಬದುಕಿನ ವಿಜಯ ಸಾಧನೆ ಮನುಷ್ಯರನ್ನು ಸರಿದಾರಿಗೆ ತರುವುದೇ ವಿಜಯದಶಮಿಯ ವಿಶಿಷ್ಟತೆ ಮಾನವರ ಹಬ್ಬ ಮಾನವೀಯ ಹಬ್ಬ ಎಂದು ಹೇಳಿದರು. ಎಲ್ಲಾ ರಾಕ್ಷಸ ಗುಣಗಳು ನಮ್ಮಲ್ಲಿವೆ, ಅದನ್ನು ಸಂಹಾರ ಮಾಡಿದರೆ, ನಮ್ಮಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಮುರಳೀಧರ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಅಮರೇಶ ಕಾರ್ಯಕ್ರಮದ ಗಣ್ಯರನ್ನು ಆತ್ಮೀಯ ಸ್ವಾಗತಿಸಿದರು.
ಸ್ಪರ್ಧೆ ನಿರ್ಣಾಯಕರಾಗಿ ಶಾಂತ ಕುಲಕರ್ಣಿ ಅವರು ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಒಟ್ಟು 4 ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದ್ಬುತ ನೃತ್ಯ ಪ್ರದರ್ಶನ ನೋಡುಗಾರರನ್ನು ಮನಸೋಲುವಂತೆ ಮಾಡಿತ್ತು.
ಈ ವೇದಿಕೆಯಲ್ಲಿ ನವರಾತ್ರಿ ರೂವಾರಿ ಮಾಜಿ ಶಾಸಕರು ಸಮಾಜ ಮುಖಂಡರು ಎ. ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಜಯವಂತರಾವ್ ಪತಂಗಿ, ಯು, ಕೃಷ್ಣಮೂರ್ತಿ,
ವೆಂಕಟಪೂರು ಬಸವರಾಜ,
ಗಾಧರ ಬೆಟ್ಟಪ್ಪ, ಕೆ ಎಲ್ ಸುಜಾತ, ನಗರಸಭೆ ಸದಸ್ಯರು ಜಿ. ರೇಖಾ, ಕವಿತಾ, ರಾಮಾಂಜಿನಯ್ಯ ಲು,ಸಿತಾರಾಮರೆಡ್ಡಿ,
ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.