ರಾಯಚೂರು. ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದೆ.
ಕೃಷ್ಣಾ ಮತ್ತು ತುಂಗಭದ್ರಾ ನದಿ ಪಾತ್ರದ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹೈ ಅಲರ್ಟ್ ಗೋಷಿಸಲಾಗಿದ್ದು ಎನ್.ಡಿಆರ್ ಎಫ್ ಸಿಬ್ಬಂದಿಗಳು ತಾಲೀಮು ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮಳೆಯಾಗದೇ ಇದ್ದರೂ ಮೇಲ್ಬಾಗದ ಮಹಾರಾಷ್ಟ್ರ ದಲ್ಲಿ ಬಾರಿ ಪ್ರಮಾದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳು ತುಂಬಿ ಗ್ರಾಮಗಳಿಗೆ
ನುಗ್ಗುವ ಆತಂಕ ಎದುರಾಗಿದೆ, ಇದರಿಂದಾಗಿ ಎನ್‌ಡಿಆರ್ ಎಫ್ ತಂಡ ಸಲಕರಣೆಗಳೊಂದಿಗೆ ಸರ್ವ ಸನ್ನದ್ದರಾಗಿದೆ.
ಅಪಾರ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿಯುತ್ತಿದ್ದು ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಬೋಟ್ ಸೇರಿದಂತೆ ಇನ್ನಿತರ ಸಲಕರಣೆಗಳ ಪರಿಶೀಲನೆ ತೊಡಗಿದ್ದಾರೆ. ಸಿದ್ದತೆಯಲ್ಲಿ ತೊಡಗಿದ್ದಾರೆ.
ಕೃಷ್ಣ ನದಿ ಪಾತ್ರ ದ ಲಿಂಗಸೂಗುರು ತಾಲುಕಿನ ಕಡದರಗಡ್ಡಿ ಸೇರಿ ನಡುಗಡ್ಡೆಗಳು ಹಾಗೂ ರಾಯಚೂರು ತಾಲೂಕಿನ ಆತ್ಕೂರು,ಕುರ್ವಕಲಾ,ನಾರದಗಡ್ಡೆ ಬಳಿ ಎನ್ ಡಿಆರ್ಎಎಫ್ ತಂಡ ಬೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದೆ.