ಲಿಂಗಸುಗೂರು. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ಕಟ್ ಆಗಿ ಕಬ್ಬಿನ ಜಮೀನಲ್ಲಿ ಬಿದ್ದರಿಂದ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂ ಬೆಳೆ ನಷ್ಟವಾಗಿರುವ ತಾಲೂಕಿನ ಬೋಗಾಪೂರ ಗ್ರಾಮದಲ್ಲಿ ನಡೆದಿದೆ.
ರೈತ ವೆಂಕಣ್ಣ ಕಿರ್ದಿ ಎನ್ನುವವರ ಕಬ್ಬಿನ ಬೆಳೆ ಎನ್ನಲಾಗಿದೆ. ಕಬ್ಬಿನ ಹೊಲದ ಮೇಲೆ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿದೆ, ವಿದ್ಯುತ್ ತಂತಿ ಕಟ್ ಆಗಿ ಕಬ್ಬಿನ ಬೆಳೆಯ ಮೇಲೆ ಬಿದ್ದಿದೆ, ಈ ವೇಳೆ ಬೆಂಕಿ ಹತ್ತಿ ಬೆಳೆ ನಾಶವಾಗಿದೆ.
ರೈತ ವೆಂಕಣ್ಣ ಕಿರ್ದಿ ಅವರ 6 ಎಕರೆ ಜಮೀನಿನಲ್ಲಿ 6 ಲಕ್ಷ ರೂ ಸಾಲ ಮಾಡಿ ಕಬ್ಬು ಬೆಳೆ ಬೆಳೆದಿದ್ದ ಉತ್ತಮ ಫಸಲು ಬಂದಿದ್ದು, 2 ತಿಂಗಳ ಬಳಿಕ ಕಟಾವು ಮಾಡಲು ಸಿದ್ದತೆ ಮಾಡಿಕೊಂಡಿದ್ದ ಅಷ್ಟರಲ್ಲಿ ಈ ಅವಘಡ ನಡೆದಿದೆ.
11 ಕೆವಿ ವಿದ್ಯುತ್ ಮೇನ್‌ಲೈನ್ ತಂತಿ ರೈತ ವೆಂಕಣ್ಣ ಕಿರ್ದಿ ಅವರ ಜಮೀನಿನ ಮೇಲೆ ಹಾದು ಹೋಗಿದೆ, ವಿದ್ಯುತ್ ತಂತಿ ಕಟ್ ಆಗಿ ಕಬ್ಬಿನ ಗದ್ದೆಯಲ್ಲಿ ಬಿದ್ದಿದೆ, ಈ ವೇಳೆ ಬೆಂಕಿ ಹತ್ತಿಕೊಂಡು ಸುಮಾರು 4 ಎಕರೆಯಷ್ಟು ಬೆಳೆ ಸುಟ್ಟು ಹೋಗಿದೆ. ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದ ಈ ಅವಘಡ ನಡೆದಿದ್ದು ಸರ್ಕಾರ ರೈತನ ನೆರವಿಗೆ ಬರಬೇಕಿದೆ.