Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ನೇತಾಜಿ ನಗರ ಶಾಲೆ, ಮಹಿಳಾ ಸಮಾಜ, ಸಾರ್ವಜನಿಕ ಉದ್ಯಾನವನಕ್ಕೆ ಸಚಿವ ಎನ್ ಎಸ್ ಬೋಸರಾಜು ಬೇಟಿ 

ನೇತಾಜಿ ನಗರ ಶಾಲೆ, ಮಹಿಳಾ ಸಮಾಜ, ಸಾರ್ವಜನಿಕ ಉದ್ಯಾನವನಕ್ಕೆ ಸಚಿವ ಎನ್ ಎಸ್ ಬೋಸರಾಜು ಬೇಟಿ 

ರಾಯಚೂರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ನೇತಾಜಿ ನಗರದ ಪ್ರಾಥಮಿಕ ಶಾಲೆ, ಮಹಿಳಾ ಸಮಾಜ, ಹಾಗೂ ಸಾರ್ವಜನಿಕ ಉದ್ಯಾನವನಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ನೇತಾಜಿ ನಗರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಅತ್ಯಂತ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ ದುರಸ್ತಿಗೊಳಿಸಿ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡದರು.
ಮಹಿಳಾ ಸಮಾಜಕ್ಕೆ ಬೇಟಿ ನೀಡಿದ ಸಚಿವರು ಸಭಾಂಗಣದ ಎರಡು ಬದಿಯಲ್ಲಿ ಹೆಚ್ಚುವರಿ ಜಾಗ ಉಳಿದುಕೊಂಡಿದ್ದು, ಕಾರ್ನರ್ ಮಾಡಬೇಕು, ಮುಂಭಾಗದಲ್ಲಿ ಕುಳಿತುಕೊಳ್ಳುವ ಆಸನಗಳನ್ನು ನಿರ್ಮಿಸಿದ್ದು, ಸ್ಲಾಬ್ ಮಾಡಲು ತಿಳಿಸಿದರು.
ಬಲ ಭಾಗದಲ್ಲಿ ಬೃಹದಾಕಾರದ ಗೋಡೆ ಶಿಥಿ ಗೊಂಡಿದೆ, ತೆರವುಗೊಳಿಸಿ ಗೋಡೆ ನಿರ್ಮಾಣ ಮಾಡಬೇಕು, ಒಳಭಾಗದಲ್ಲಿ ದೊಡ್ಡದಾದ ಬೇವಿನಮರವಿದ್ದು, ಸಂರಕ್ಷಣೆ ಮಾಡುವುದರ ಜೊತೆಗೆ ಸುತ್ತಲೂ ,ಮಣ್ಣು ಬಿದ್ದು ಹೋಗದಂತೆ ರಕ್ಷಣೆ ಮಾಡಲು ಸೂಚಿಸದರು.


ಮಹಿಳಾ ಸಮಾಜದಲ್ಲಿನ ಮಳಿಗೆಗಳ ಮಾಲೀಕ ರು ಹಿಂಭಾಗದಲ್ಲಿ ಗೇಟ್ ಮಾಡಿಕೊಂಡಿದ್ದಾರೆ, ಬಂದ್ ಮಾಡಿಸಬೇಕು, ಬಲ ಬಾಗದಲ್ಲಿ ಗಣ್ಯರು ಆಗಮಿಸಲು ರಸ್ತೆ ಗೇಟ್ ಅಳವಡಿಸಿ ರಸ್ತೆ ಮಾಡಬೇಕು ಎಂದರು.
ಸಾರ್ವಜನಿಕ ಉದ್ಯಾನವನಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಹಳೆಯದಾದ ಕಟ್ಟಡವಿದ್ದು ತೆರವುಗೊಳಿಸಿ, ಹಳೆಯ ಮರಗಳು ಮುರಿದು ಬಿದ್ದಿದ್ದು ತೆರವು ಮಾಡಬೇಕು, ನಂತರ ಸಾರ್ವಜನಿಕರಿಗೆ ಕಾರ್ಯಕ್ರಮಗಳ ಆಯೋಜನೆ ಹೊರಾಂಗಣ ರಂಗ ಮಂದಿರ ಮಾದರಿಯಲ್ಲಿ ನಿರ್ಮಾಣಕ್ಕೆ ಸೂಚನೆ ನೀಡಿದರು‌.
ಹೈ ಮಾಸ್ ದೀಪ, ಹಾಗೂ ಪಾದಚಾರಿ ರಸ್ತೆ ಮಾಡಬೇಕು, ಜನರು ಕುಳಿತುಕೊಳ್ಳಲು ಮರಗಳ ಕೆಳಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು,
ಉದ್ಯಾನವನದಲ್ಲಿ ಹಳೆಯ ಗೇಟ್ ಬದಲಾವಣೆ ಮಾಡಿಸಿ, ಶೌಚಾಲಯ ದುರಸ್ತಿಯಲ್ಲಿದ್ದು ಹೊಸ ಶೌಚಾಲಯ ನಿರ್ಮಾಣ ಕುಡಿಯುವ ನೀರಿನ ಅಳವಟಿಕೆ ಹಾಗೂ ಸುತ್ತಲೂ ಗೋಡೆ ಎತ್ತರಗೊ ಳಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ನಗರಾಭಿವೃದ್ಧಿ ಪೌರಾಯುಕ್ತ ಮಹೆಬೂಬ್ ಅಹ್ಮದ್ ಪಾಷಾ, ನಗರಸಭೆ ಸದಸ್ಯ ಸಾಜೀದ್ ಸಮೀರ್, ರಮೇಶ ಯಾದವ್, ಅನ್ವರ್ ಸಾಬ್, ಸೇರಿದಂತೆ ಅಧಿಕಾರಿಗಳು ಇದ್ದರು.

Megha News