ರಾಯಚೂರು.ಗದ್ವಾಲ್ ರಸ್ತೆಯು ತಗ್ಗು ಗುಂಡಿ ಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ಇಂದು ಬೆಳಗ್ಗೆ ಲಾರಿಯೊಂದು ಭತ್ತ ತುಂಬಿಕೊಂಡು ಸಾಗಿಸುತ್ತಿರುವಾಗ ತಗ್ಗುನಲ್ಲಿ ಲಾರಿ ವಾಲಿದ್ದರಿಂದ ಲಾರಿಯಲ್ಲಿ ಭತ್ತಕ್ಕೆ ಕಟ್ಟಿದ ಅಗ್ಗ ಹರಿಸುಹೋಗಿ ಭತ್ತ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಭತ್ತದ ಮೂಟೆಗಳು ರಸ್ತೆಯಲ್ಲಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಗಿದೆ.
ನಗರದ ಗದ್ವಾಲ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ, ನಿತ್ಯ ಇದೇ ರಸ್ತೆಯಲ್ಲಿ ವಾಹನಗಳ ಸಂಚಾರಿಸುತ್ತಿದೆ. ಕೃಷ್ಣ ನದಿಯ ಸೇತುವೆ ಕಾಮಗಾರಿ ನಡೆಯುತ್ತಿದೆ, ಹೈದರಾಬಾದ್ ಮಾರ್ಗವಾಗಿ ಸಂಚರಿಸುವ ನೂರಾರು ವಾಹನಗಳು ಗದ್ವಾಲ್ ರಸ್ತೆ ಮಾರ್ಗವಾಗಿ ತೆರಳುತ್ತಿವೆ.
ಈ ರಸ್ತೆಯಲ್ಲಿರುವ ಬಡಾವಣೆಯ ನಿವಾಸಿಗಳು ಸಂಚಾರ ಮಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿಲ್ಲಿ ಹತ್ತಾರು ಅಪಘಾತ ನಡೆದಿವೆ, ಭತ್ತದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕಿಡಾಗಿವೆ,ಇಂದು ಭತ್ತದ ಲಾರಿ ರಸ್ತೆಯಲ್ಲಿನ ತಗ್ಗುನಲ್ಲಿ ವಾಲಿದ್ದು, ಯಾವುದೇ ಪ್ರಾಣಾಪಾಯ ಸಂಬಂಧಿಸಿಲ್ಲ,
ನಿತ್ಯ ಈ ರಸ್ತೆಯಲ್ಲಿ ಜನರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ, ಸಾರ್ವಜನಿಕರು ನಗರದಭೆಗೆ ಮತ್ತು ಜಿಲ್ಲಾಡಳಿತಕ್ಕೆ ಇಡಿ ಶಾಪ ಹಾಕಿತ್ತಿದ್ದಾರೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ನಡೆಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.