ರಾಯಚೂರು.ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಮತದಾನ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಮಳೆಯಾಗಿ ದ್ದರಿಂದ ಬೆಳಗ್ಗೆ ಮತದಾನ ಇಳಿಮುಖವಾಗಿತ್ತು.
11 ಗಂಟೆ ನಂತರ ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಳೆದ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ, ಇದರಿಂದ ಮತದಾರರು ಮತಗಟ್ಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದು ಸಮಯವಾದಂತೆಲ್ಲ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.
ನಗರದ ಪ್ರದೇಶದಲ್ಲಿ 7 ಮತಗಟ್ಟೆ ನಿರ್ಮಾಣ ಮಾಡಿದ್ದು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ತಹಶಿಲ್ದಾರ್ ಕಚೇರಿ, ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಕರ್ನಾಟಕ ಸಂಘ ಹಾಗೂ ಗ್ರಾಮೀಣ ಭಾಗದ ಯರಗೇರಾ ಮತ್ತು ದೇವಸೂಗುರುನಲ್ಲಿ ಮತ ಕೇಂದ್ರಗಳಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮದ್ಯಾಹ್ನ 12 ಗಂಟೆ ವೇಳೆಗೆ 2ನೇ ಸುತ್ತಿನ ಒಟ್ಟು 4822, ಶೇ. 23.73 ರಷ್ಟು ಮತದಾನವಾಗಿದೆ. 3331 ಪುರುಷರು, 1491 ಮಹಿಳಾ ಮತದಾ ರರು ಮತದಾ ಮಾಡಿದ್ದಾರೆ.
ಮತದಾನ ಕೇಂದ್ರಕ್ಕೆ ಪದವಿಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ಬೇಡಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿ,
ಮತದಾನ ಪ್ರಕ್ರಿಯೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಯವರೆಗೆ ನಡೆಯಲಿದೆ, ಮಳೆಯಾಗಿದ್ದರಿಂದ ಬೆಳಗ್ಗೆ ಮತದಾನ ಪ್ರಮಾಣ ಕಡಿಮೆಯಾಗಿತ್ತು, ಈಗ ಮತದಾನ ಕೇಂದ್ರಕ್ಕೆ ಬೇಟಿ ನೀಡಿದ ವೇಳೆ ಎಲ್ಲಾ ಕೇಂದ್ರದಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಈಗ ಮತದಾನವು ಹೆಚ್ಚಳವಾಗಿದ್ದು 30 ರಷ್ಟು ಮತದಾನವಾಗಿದೆ, ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಡಿ,ತಹಶಿಲ್ದಾರ್ ಸುರೇಶ ವರ್ಮಾ, ಸಹಾಯಕ ಆಯುಕ್ತ ಸಂಪಗಾವಿ, ಇದ್ದರು.