ರಾಯಚೂರು. ಉಮಾನ್ ದೇಶದ ಮಸ್ಕತ್ ನಿಂದ ರಾಯಚೂರಿಗೆ ಬಂದ ಮತದಾನ ಮಾಡಿ ಮಹತ್ವವನ್ನು ಸಾರಿದ್ದಾರೆ.
ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಅವರು ಕಳೆದ 25 ವರ್ಷಗಳಿಂದ ಉಮಾನ್ ದೇಶದ ಮಸ್ಕತ್ ಪ್ರದೇಶದಲ್ಲಿ ಎನ್ಆರ್ಐ ಆಗಿ ಮಾಡುತ್ತಿದ್ದಾರೆ,
ದೇಶದಲ್ಲಿ ಲೋಕಸಭಾ ಚುನಾವಣಾ ನಡೆಯು ತ್ತಿರುವ ಹಿನ್ನೆಲೆಯಲ್ಲಿ ಮತದಾನ ಮಾಡಲು ತಮ್ಮ ಗ್ರಾಮಕ್ಕೆ ಬಂದು ಮತದಾನ ಮಾಡಿ ಮತ ದಾನದ ಮಹತ್ವವನ್ನು ಸಾರಿದ್ದಾರೆ.
ಮಸ್ಕತ್ ನಿಂದ ರಾಯಚೂರಿಗೆ ಆಗಮಿಸಲು ಅವರು 3 ಲಕ್ಷ ವೆಚ್ಚ ಮಾಡಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.
ದಾನಗಳಲ್ಲಿ ಶ್ರೇಷ್ಠದಾನ ಮತದಾನವಾಗಿದೆ, ನಮ್ಮ ಕುಟುಂಬದ ಜೊತೆಗೆ ಆಗಮಿಸಿ ಮತದಾನ ಮಾಡಿದ್ದೇವೆ ಪ್ರತಿಯೊಬ್ಬರು ಮತದಾನದ ಮಹತ್ವವನ್ನು ಅರಿತುಕೊಂಡ ಮತದಾನ ಮಾಡಬೇಕು, ಮತದಾನ ಪ್ರಜಾಪ್ರಭುತ್ವದ ಹಕ್ಕಾಗಿದ್ದು ಆ ಹಕ್ಕನ್ನು ನಾವು ಚಲಾಯಿಸಬೇಕು ಎಂದು ತಿಳಿಸಿದರು.