ರಾಯಚೂರು: ಜೆಡಿಎಸ್ ಪಕ್ಷದವರಿಗೆ ಬೇರೆ ಕೆಲಸವಿಲ್ಲ ಅವರಿಗೆ ಅಭಿವೃದ್ಧಿಪರ ಕೆಲಸ ಮಾಡುವವರ ಮೇಲೆ ಆರೋಪ ಮಾಡುವುದು ಮತ್ತು ತೇಜೋವಧೆ ಮಾಡುವುದೇ ಕೆಲಸವಾಗಿ ಬಿಟ್ಟಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ಅವರು ಹೇಳಿದರು.
ಇತ್ತೀಚೆಗೆ ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ ಅವರು ಸಚಿವ ಎನ್.ಎಸ್ ಭೋಸರಾಜು ಅವರ ಪುತ್ರ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದರು
ಭಾನುವಾರ ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮ ಮರಳು ಸಾಗಾಣಿಕೆಯಲ್ಲಿ ಕಾಂಗ್ರೆಸ್ ಸಚಿವರ ಪುತ್ರನ ಕೈವಾಡವಿದೆ ಎಂಬ ಜೆಡಿಎಸ್ ಜಿಲ್ಲಾಶ್ಯಕ್ಷ ಎಂ.ವಿರುಪಾಕ್ಷಿ ಅವರ ಹೇಳಿಕೆಗೆ ಟಾಂಗ್ ನೀಡಿದರು. ಜೆಡಿಎಸ್ ಪಕ್ಷದ ನಾಯಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಬೇರೆ ಕೆಲಸವಿಲ್ಲ ಅವರು ಇಂತಹ ಅಕ್ರಮಗಳನ್ನು ಮಾಡುತ್ತಾರೆ ಅದಕ್ಕಾಗಿಯೇ ಇಂತಹ ಹೇಳಿಕೆಯನ್ನು ನಿಡುತ್ತಾರೆ.
ಪಕ್ಷದವರಿಗೆ ಬೇರೆ ಕೆಲಸವಿಲ್ಲ ಇಲ್ಲಸಲ್ಲದ ಆರೋಪಗಳನ್ನು ಮಾಡುವುದೇ ಅವರ ಕೆಲಸವಾಗಿ ಬಿಟ್ಟಿದೆ. ಆರೋಪ ಮಾಡುವ ಮೊದಲು ಸಾಕ್ಷಿಗಳು ಇರಬೇಕು. ಸಾಕ್ಷಿಗಳಿಲ್ಲದೇ ಆರೋಪ ಮಾಡಿದರೆ ಅದಕ್ಕೆ ಬೆಲೆ ಇರುವುದಿಲ್ಲ. ಜೆಡಿಎಸ್ ಕಾರ್ಯಕರ್ತರು ಹಾಗೂ ಆ ಪಕ್ಷದ ನಾಯಕರು ಹೇಳಿಕೆ ನೀಡುವ ಮೊದಲು ಸಾಕ್ಷಿಗಳನ್ನು ಹಿಡಿದಿಟ್ಟುಕೊಂಡಿರಬೇಕು ಎಂದು ತಿಳಿಸಿದರು.
Megha News > Politics News > ಜೆಡಿಎಸ್‌ಗೆ ಆರೋಪ ಮಾಡುವುದೇ ಕೆಲಸವಾಗಿ ಬಿಟ್ಟಿದೆ: ಎನ್.ಎಸ್ ಭೋಸರಾಜು ತಿರುಗೇಟು
ಜೆಡಿಎಸ್‌ಗೆ ಆರೋಪ ಮಾಡುವುದೇ ಕೆಲಸವಾಗಿ ಬಿಟ್ಟಿದೆ: ಎನ್.ಎಸ್ ಭೋಸರಾಜು ತಿರುಗೇಟು
Tayappa - Raichur06/08/2023
posted on
Leave a reply