Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics News

ಕಾರ್ಪೋರೇಟ್ ಬಂಡವಾಳದಾರರ ಹಿತಕ್ಕಾಗಿ ಸರ್ಕಾರಗಳಿಂದ ನವ ಉದಾರಿವಾದಿ ನೀತಿ ಅನುಸರಣೆ: ಕೆ.ಪ್ರಕಾಶ

ಕಾರ್ಪೋರೇಟ್ ಬಂಡವಾಳದಾರರ ಹಿತಕ್ಕಾಗಿ ಸರ್ಕಾರಗಳಿಂದ ನವ ಉದಾರಿವಾದಿ ನೀತಿ ಅನುಸರಣೆ: ಕೆ.ಪ್ರಕಾಶ

ರಾಯಚೂರು: ಸಿಪಿಎಂ ಪಕ್ಷದ 24ನೇ ರಾಜ್ಯ ಸಮ್ಮೇಳನದಲ್ಲಿ ತೀರ್ಮಾನಿಸಿದಂತೆ ಜನರ ಸಮಸ್ಯೆಗಳ ಆಧಾರದಲ್ಲಿ ಹೋರಾಟವನ್ನು ವಿಸ್ತರಿಸಲು ಹಾಗೂ ಕೇಂದ್ರ ಹಾಗೂ ರಾಜ್ಯದ ಸರ್ಕಾರದ ವಿರುದ್ಧ ಹೋರಾಟವನ್ನು ಗಟ್ಟಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಕಮ್ಯೂನಿಸ್ಟ್(ಮಾರ್ಕ್ಸ್ವಾದಿ)(ಸಿಪಿಐಎಂ) ಪಕ್ಷದ ಕಾರ್ಯದರ್ಶಿ ಕೆ.ಪ್ರಕಾಶ ಹೇಳಿದರು.

ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ರೈತರು, ಕಾರ್ಮಿಕರು ಹಾಗೂ ಇತರೆ ಜನ ವಿಭಾಗಗಳ ಮೇಲೆ ಸಂಕಟಗಳನ್ನು ಹೇರುತ್ತಿದೆ. ಸರ್ಕಾರದ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಕೇಂದ್ರದ ಮೋದಿ ಸರ್ಕಾರ ದೇಶದ ಬಹುಸಂಖ್ಯಾತ ಬಡವರನ್ನು ಬಲಿಕೊಟ್ಟು ಮತೀಯವಾದಿ ನೀತಿಗಳ ನೆರಳಲ್ಲಿ ಕಾರ್ಪೋರೇಟ್ ಬಂಡವಾಳದಾರರ ಹಿತಕ್ಕಾಗಿ ನವ ಉದಾರಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಜತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಕೂಡ ಮೋದಿ ನೀತಿಗಳನ್ನೇ ಅನುಸರಿಸಲಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು ಹಾಗೂ ಇತರೆ ದುಡಿಯುವ ವರ್ಗದ ಜನರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ಅಭದ್ರತೆ, ರೈತರ ಬೆಳೆಗೆ ಸಿಗದ ಬೆಂಬಲ ಬೆಲೆ, ಬಲವಂತದ ಭೂಸ್ವಾಧೀನ, ಶಿಕ್ಷಣ, ಆರೋಗ್ಯ ಮತ್ತು ಇತರೆ ನಾಗರಿಕ ಸೇವೆಗಳ ದುಬಾರಿ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ಜರ್ಜರಿತಗೊಂಡಿದ್ದಾರೆ. ದೇಶದಲ್ಲಿ ಸಣ್ಣ ಪುಟ್ಟ ಆಚರಣೆಗಳನ್ನು ದ್ವೇಷದ ಆಚರಣೆಗಳನ್ನಾಗಿಸಿದ ಬಿಜೆಪಿ ಸರ್ಕಾರ ಹಾಗೂ ಆರ್‌ಎಸ್‌ಎಸ್ ಸೇರಿಕೊಂಡು ಕೋಮುವಾದವನ್ನು ಪ್ರಚೋಧಿಸಲು ಮುಂದಾಗಿವೆ ಎಂದು ಆರೋಪಿಸಿದರು.

ಭೂ ರಹಿತ ಕುಟುಂಬಗಳಿಗೆ ಮನೆ, ನಿವೇಶನ, ಅರಣ್ಯ ಸಾಗುವಳಿದಾರರಿಗೆ ರಕ್ಷಣೆ, ಬಲವಂತದ ಭೂ ಸ್ವಾಧೀನ ಕೈ ಬಿಡಲು, ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ, ಸಾರ್ವಜನಿಕ ಆಸ್ತಿಗಲಲ ಖಾಸಗೀಕರಣದ ವಿರುದ್ಧ, ದಲಿತರ ಮೇಲೆಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಕಡಿವಾಣಕ್ಕೆ ಒತ್ತಾಯಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಲು ಹಾಗೂ ಬಡವರ ಬಿಪಿಎಲ್ ಕಾರ್ಡ್ ರದ್ದತಿ ವಿರೋಧಿಸಿ , ಸಾಗರ ಮಾಲಾ ಯೋಜನೆಯಿಂದಾಗಿ ಕರಾವಳಿ ಜನರ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ನಿವಾರಣೆಗೆ, ಕೃತಕ ಬುದ್ದಿಮತ್ತೆಯಿಂದಾಗಿ ಹೆಚ್ಚುತ್ತಿರುವ ಉದ್ಯೋಗ ನಷ್ಟವನ್ನು ತಡೆಗಟ್ಟಲು, ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆಯಿಂದ ಐಟಿ, ಐಟಿಇಎಸ್ ವಲಯಕ್ಕೆ ವಿನಾಯತಿ ನೀಡಿರುವುದನ್ನು ವಿರೋಧಿಸಿ, ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಶೀಘ್ರವೇ ನಡೆಸುವಂತೆ ಒತ್ತಾಯಿಸಿ ಹಾಗೂ ಇತರೆ 32 ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ರಮೇಶ ವೀರಾಪುರ, ನರಸಣ್ಣ, ಶಬ್ಬೀರ್, ಗಿರಿಯಪ್ಪ ಪೂಜಾರ್ ಸೇರಿದಂತೆ ಇತರರಿದ್ದರು.

 

Megha News