Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿತ

ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿತ

ರಾಯಚೂರು: ರಾಯಚೂರು ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ನಗರದಲ್ಲಿ ಅವಾಂತರಗಳು ಸೃಷ್ಠಿಯಾಗಿದ್ದು, ಇದರ ಭಾಗವಾಗಿ ನಗರದ ಮಕ್ತಲಪೇಟೆಯಲ್ಲಿ ಮನೆ ಗೋಡೆ ಕುಸಿತವಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರಂತರ ಮಳೆಗೆ ಶಾಂತಮ್ಮ ಎಂಬುವವರ ಮನೆ ಗೋಡೆ ಕುಸಿದಿದೆ. ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ಗೋಡೆ ಕುಸಿದು ಬಿದ್ದಿದೆ. ಮಳೆ ಹಿನ್ನೆಲೆ ಗೋಡೆ ಒದ್ದೆಯಾಗಿದ್ದರಿಂದ ನಿನ್ನೆ ರಾತ್ರಿ ಬೇರೆ ಕಡೆ ಮಲಗಿದ್ದರು. ಹೀಗಾಗಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಜಟಿ ಜಿಟಿ ಮಳೆ ಮುಂದುವರೆದಿದ್ದು ಮನೆಯವರಿಗೆ ಆತಂಕವೂ ಹೆಚ್ಚಾಗಿದೆ.

Megha News