ರಾಯಚೂರು. ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ಅವರ ಆದೇಶದ ಮೇರೆಗೆ, ರಾಯಚೂರು ವಲಯ ಮತ್ತು ಉಪ ವಿಭಾಗದಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಖಲಿಸಿದ ವಿವಿಧ ಪ್ರಕರಣಗಳಲ್ಲಿ ಜಪ್ತುಪಡಿಸಿಕೊಂಡ ೯೦೭.೫೧ ಲೀಟರ್ ಬಿಯರ್, ೩೬೭೭ ಲೀಟರ್ ಸೇಂದಿ, ೯೬೧.೬ ಕೆ.ಜಿ ಸಿ.ಹೆಚ್., ೦೬ ಕೆ.ಜಿ ವೈಟ್ ಪೇಸ್ಟ್, ೫೦೦ ಗ್ರಾಂ ಸಕ್ಕರೆ, ೦೧ ಕೆ.ಜಿ ಬಿಳಿ ಸುಣ್ಣ ಸೇರಿದಂತೆ ಒಟ್ಟು ೪,೪೮೭.೫೯ ಲೀಟರ್ ಮದ್ಯವನ್ನು ತಹಶೀಲ್ದಾರ ಸುರೇಶ ವರ್ಮಾ, ರಾಯಚೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಬಿ.ಕೃಷ್ಣಹರಿ, ಅಬಕಾರಿ ನಿರೀಕ್ಷಕ ಸುರೇಶ ಶಂಕರ, ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೋನ ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ ಗೌಡ, ಸಬಕಾರಿ ಉಪನಿರೀಕ್ಷಕರಾದ ನರೇಂದ್ರ, ರಾಚಮ್ಮ ಸೇರಿದಂತೆ ಸಿಬ್ಬಂದಿಯವರ ಸಮಕ್ಷಮದಲ್ಲ್ಲಿ ರಾಯಚೂರು ನಗರದ ಹೊರ ವಲಯದಲ್ಲಿರುವ ರಾಯಚೂರು-ಹೈದ್ರಾಬಾದ್ ರಸ್ತೆಯಲ್ಲಿ ಬರುವ ಕೆಐಡಿಬಿಎಲ್ ಏರಿಯಾದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನಾಶಪಡಿಸಲಾಯಿತು.
Megha News > Crime News > ಅಕ್ರಮ ಮದ್ಯ ಮಾರಾಟ ದಾಳಿ ಮದ್ಯವಶ, ಇಲಾಖೆಯಿಂದ ನಾಶ