ರಾಯಚೂರು. ನಗರದಲ್ಲಿ ಇಂದಿನಿಂದ ಎರಡು ದಿನಗಳವರೆಗೆ ಕುಡಿಯುವ ನೀರು ಸರಬರಾಜು ವಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪೌರಾ ಯಕ್ತರು ತಿಳಿಸಿದ್ದಾರೆ.
ನಗರಕ್ಕೆ ಕುಡಿಯುವ ನೀರಿನ ಸರಬರಾಜು ಪೈಪ್ ಲೈನ್ ವಡ್ಲೂರ್ ಕ್ರಾಸ್ ಹತ್ತಿರ ಹಾದು ಹೋಗಿ ದ್ದು, 100 ಎಮ್.ಎಮ್ ವ್ಯಾಸದ ಮುಖ್ಯ ಪೈಪ್ಲೈನ್ ಅತಿ ಹೆಚ್ಚಿನ ನೀರಿನ ಒತ್ತಡದಿಂದ ಸೋರಿಕೆ ಆಗಿ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ, ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಾಗಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಎರಡು ದಿನಗಳ ವರೆಗೆ ಕೃಷ್ಣಾ ನದಿಯ ನೀರು ಅವಲಂಬಿತ ಪ್ರದೇಶದ ಬಡಾವಣೆಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆದರಿಂದ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಿ ಹಾಗೂ ಕುಡಿಯುವ ನೀರನ್ನು ಕುದಿಸಿ ಆರಿಸಿ ಸೋಸಿ ಕುಡಿಯಲು ಮತ್ತು ನಗರಸಭೆಯೊಂದಿಗೆ ಸಹಕರಿಸಲು ತಿಳಿಸಿದ್ದಾರೆ.