ರಾಯಚೂರು- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ 6-ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮೇ.7ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 12,99,806 ಮತದಾರರು ಮತ ಚಲಾಯಿಸಿದ್ದು ಶೇ.64.66ರಷ್ಟು ಮತದಾನವಾಗಿದೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,10,103 ಮತದಾರರಿದ್ದು, ಅದರಲ್ಲಿ 9,94,646 ಪುರುಷ ಮತದಾರರು, 10,15,158 ಮಹಿಳಾ ಮತದಾರರು ಹಾಗೂ 299 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದು, ಇದರಲ್ಲಿ 6,57,867 ಪುರುಷ ಮತದಾರರು, 6,41,917 ಮಹಿಳಾ ಮತದಾರರು ಹಾಗೂ 22 ಲಿಂಗತ್ವ ಅಲ್ಪಸಂಖಾತರು ಮೇ.7ರಂದು ನಡೆದ ಲೋಕಸಭಾ ಚುಣಾವಣೆಯ ಮತದಾನದಲ್ಲಿ ಮತ ಚಲಾಯಿಸಿದ್ದಾರೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 83,810 ಪುರುಷ ಮತದಾರರು, 82,741 ಮಹಿಳಾ ಮತದಾರರು ಹಾಗೂ 6 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,66,557 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.70.51ರಷ್ಟು ಮತದಾನವಾಗಿದೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 75,021 ಪುರುಷ ಮತದಾರರು, 75,783 ಮಹಿಳಾ ಮತದಾರರು ಹಾಗೂ 3 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,50,807 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.61.25ರಷ್ಟು ಮತದಾನವಾಗಿದೆ.
ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ 77,345 ಪುರುಷ ಮತದಾರರು, 76,084 ಮಹಿಳಾ ಮತದಾರರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,53,431 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.62.46ರಷ್ಟು ಮತದಾನವಾಗಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 75,755 ಪುರುಷ ಮತದಾರರು, 72,240 ಮಹಿಳಾ ಮತದಾರರು ಹಾಗೂ 3 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,47,998 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.61.85ರಷ್ಟು ಮತದಾನವಾಗಿದೆ.
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 82,477 ಪುರುಷ ಮತದಾರರು, 81,702 ಮಹಿಳಾ ಮತದಾರರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,64,181 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.62.11ರಷ್ಟು ಮತದಾನವಾಗಿದೆ.
ಶೋರಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,09,995 ಪುರುಷ ಮತದಾರರು, 1,05,270 ಮಹಿಳಾ ಮತದಾರರು ಹಾಗೂ 3 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ಶೋರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,268 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.76.04ರಷ್ಟು ಮತದಾನವಾಗಿದೆ.
ಶಹಪುರ ವಿಧಾನಸಭಾ ಕ್ಷೇತ್ರದಲ್ಲಿ 76,990 ಪುರುಷ ಮತದಾರರು, 73,954 ಮಹಿಳಾ ಮತದಾರರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ಶಹಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,50,945 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.61.08ರಷ್ಟು ಮತದಾನವಾಗಿದೆ.
ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 76,474 ಪುರುಷ ಮತದಾರರು, 74,143 ಮಹಿಳಾ ಮತದಾರರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,50,619 ಮತದಾರರು ಮತವನ್ನು ಚಲಾಯಿಸಿದ್ದಾರೆ ಶೇ.60.70ರಷ್ಟು ಮತದಾನವಾಗಿದೆ.