ರಾಯಚೂರು. ಕ್ರಿಕೆಟ್, ಕಬ್ಬಡಿ, ಸೇರಿದಂತೆ ಇತರೆ ಕ್ರೀಡೆಗಳಿಗೆ ಕ್ರೀಡಾಂಗಣವಿಲ್ಲದೆ ಇರುವುದರಿಂದ ಯುವಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾ ಗಿದೆ, ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಾಣ ಮಾಡಿ ಅಭಿವೃದ್ಧಿಪ ಡಿಸಲು ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಗ್ರಾಮದ ಯುವಕರು ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಪಿಡಿಒ ಅನ್ನಪೂರ್ಣ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಕ್ರೀಡಾಂಗಣವಿಲ್ಲದೆ ಯುವಕರು, ವಿದ್ಯಾರ್ಥಿಗಳು ಆಟವಾಡಲು ಸ್ಥಳವಿಲ್ಲದೆ ತೊಂದರೆಯಾಗಿದ್ದು,
ಖಾಲಿ ಜಮೀನುಗಳಲ್ಲಿ ಆಟವಾಡುವ ಪರಸ್ಥಿತಿ ನಿರ್ಮಾಣವಾಗಿದೆ, ಗ್ರಾಮದಲ್ಲಿ ಶಾಲಾ ಅವರದಲ್ಲಿ ಆಟವಾಡಲು ಶಾಲಾ ಮುಖ್ಯ ಗುರುಗಳು ಅಡ್ಡಿಪಡಿಸುತ್ತಿದ್ದಾರೆ. ಬೇರೆಡೆ ಖಾಲಿ ಜಮೀನುಗಳಲ್ಲಿ ಆಟವಾಡವೇಕಾದ ಸ್ಥಿತಿ ಇದೆ ಎಂದರು.
ಸರ್ಕಾರಿ ಜಾಗವನ್ನು ಗುರುತಿಸಿ ಗ್ರಾಮದ ಯುವ ಕರು ಆಟವಾಡಲು ಕ್ರೀಡಾಂಗಣ ನಿರ್ಮಾಣ ಮಾಡಿಸಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು.
ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಅವರು ಮನವಿ ಸ್ವೀಕರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಬಡ್ಡಿ, ಕೋಕೋ, ವಾಲಿಬಾಲ್ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮದ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗವನ್ನು ಗುರುತಿಸಿ ಪಂಚಾಯಿತಿ ಸಭೆಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಗುವು ದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್, ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ ನಾಯಕ, ಕಾರ್ಯದರ್ಶಿ ಸಂತೋ ಷ್ ಸಾಗರ್, ನರಸಿಂಹ ಎಂ. ಜಿ, ಉಪಾಧ್ಯಕ್ಷ ಶಿವರಾಜ್, ತಿಮ್ಮಾರೆಡ್ಡಿ, ಶಿವಪುತ್ರ ಹಿರೇಮಠ್, ಸಂದೀಪ್, ಮಹೇಶ್, ರವಿ, ರಮೇಶ್, ಸತೀಶ್, ಮಂಜುನಾಥ್ ಎಚ್, ವೀರೇಶ್, ಅನಿಲ್ ಕುಮಾರ್, ಯಂಕಪ್ಪ, ಮಂಜುನಾಥ್, ಅನಿಲ್ ಮುಂತಾದ ಗ್ರಾಮದ ಯುವಕರು ಭಾಗವಹಿಸಿದ್ದರು.