ರಾಯಚೂರು. ಇಂದಿನಿಂದ ರಾಜ್ಯಾದ್ಯಂತವಾಗಿ ಶಾಲೆಗಳು ಆರಂಭವಾಗುತ್ತಿದ್ದು, ಆದರೆ ಜಿಲ್ಲೆ ಯಲ್ಲಿ ಕೆಲ ಶಾಲೆಗಳಿಗೆ ಶಿಕ್ಷಕರು ಇಲ್ಲದಿದ್ದರೂ ಆ ಶಾಲೆಗಳು ಆರಂಭವಾಗಿಲ್ಲ, ಸರ್ಕಾರ ಶಾಲೆಗಳಿಗೆ ಶಿಕ್ಷಕರು ನೇಮಕಾತಿ ಮಾಡದೇ ಇರುವುದರಿಂದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಇಲ್ಲದಂತಾಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಸುಮಾರು 83 ಶಾಲೆಗಳಿಗೆ ಒಬ್ಬೇ ಒಬ್ಬ ಶಿಕ್ಷಕರೇ ಇಲ್ಲ ಆದರೂ ಸಹ ಶಾಲೆ ಆರಂಭವಾಗಿದೆ, ಶಿಕ್ಷಕರು ಇಲ್ಲದ ಕಾರಣ ಶಾಲೆಯ ಭಾಗಿಲು ಮುಚ್ಚಿದೆ.
ಮಾನವಿ ತಾಲೂಕಿನಲ್ಲಿ 25 ಶಾಲೆಗಳಲ್ಲಿಯೂ ಸಹ ಶಿಕ್ಷಕರೇ ಇಲ್ಲ, ಇನ್ನೂ ರಾಯಚೂರು ತಾಲೂಕಿನಲ್ಲಿ 9 ಶಾಲೆಗಲ್ಲಿ ಶಿಕ್ಷಕರು ಇಲ್ಲದೇ ಹೋಗಿದ್ದು, ಶಾಲೆಗೆ ಶಿಕ್ಷಕರು ಇಲ್ಲದೇ ಇರುವುದರಿಂದ ಶಾಲೆಯ ಬೀಗ ತೆರೆಯುವುದು ಅನುಮಾನವಾಗಿದೆ.
ಶಾಲೆಯ ಬೀಗ ತೆಗೆಯಲು ಒಬ್ಬ ಶಿಕ್ಷಕರನ್ನು ನೇಮಿಸಬೇಕಿದೆ, ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಶಿಕ್ಷಕರ ನೇಮಕ ಅಸಾಧ್ಯ, ಜೊತೆಗೆ ಅತಿಥಿ ಶಿಕ್ಷಕರು ಸಹ ನೇಮಕ ಮಾಡಿಲ್ಲ, ದೇವದುರ್ಗ, ಮಾನವಿ, ರಾಯಚೂರು ತಾಲೂಕಿನಲ್ಲಿ ಒಟ್ಟು 117 ಶಾಲೆಗಲ್ಲಿ ಶಿಕ್ಷಕರು ಇಲ್ಲದ ಕಾರಣ ಶಾಲಾ ಆರಂಭವಾಗಿದ್ದರಿಂದ ಶಾಲೆಯ ಬಾಗಿಲು ಮುಚ್ಚಿವೆ. ಸರ್ಕಾರ ಕೂಡಲೇ ಶಿಕ್ಷಕರನ್ನು ನೇಮಿಸಬೇಕಿದೆ.