ರಾಯಚೂರು. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಜೂ.೩ ರಂದು ನಡೆಯಲಿದ್ದು ಜಿಲ್ಲೆಯಲ್ಲಿ ೩೦ ಮತಗಟ್ಟೆಗಳನ್ನು ಸ್ಥಾಪಿಸಲಾ ಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಮಾಧ್ಯಮಗೋಷ್ಟಿ ಉದ್ದೇಶೀಸಿ ಮಾತನಾಡಿ ಜಿಲ್ಲೆಯಲ್ಲಿ ನೊಂದಣಿ ಮಾಡಿಕೊಂಡ ೨೦೩೧೭ಜನ ಪದವೀಧರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ೧೩,೫೮೧ ಪುರುಷರು,೬೭೩೧ ಮಹಿಳೆಯರು, ಇತರೆ ೫ಜನರು ಸೇರಿದ್ದಾರೆ.
ಮತದಾನಕ್ಕೆ ರಾಯಚೂರು ನಗರದ ಸೇರಿದಂತೆ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಮತದಾನ ಕೇಂದ್ರಗಳನ್ನು ಸ್ತಾಫಿಸಲಾಗುತ್ತದೆ. ಮತದಾನ ದಿನದಂತೆ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ. ೨೩ ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮತ್ತು ಇತರೆ ೭ಮತಗಟ್ಟೆಗಳಲ್ಲಿ ವಿಡಿಯೋ ವ್ಯವಸ್ಥೆ ಮಾಡಲಾಗುತ್ತದೆ. ಮತದಾರರ ಮೊಬೈಲ್ ಸಂಖ್ಯೆ ಮಾಹಿತಿಯನ್ನು ರವಾನಿಸಲಾಗುತ್ತದೆ.ಕ್ಯೂ ಆರ್ ಕೋರ್ಡಬಳಸಿ ಮತಗಟ್ಟೆ ತಲುಪಬಹುದಾಗಿದೆ. ಮತ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದರು. ಮತಗಟ್ಟೆಗಳಿಗೆ ೧೬೪ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ೪೧ ಪಿಆರ್‌ಓ, ೪೧ ಎಪಿಆರ್‌ಓ ಹಾಗೂ ೮೨ ಇತರು ಸೇರಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.