ರಾಯಚೂರು.ಮೈಸೂರು ದಸರಾ ಮಾದರಿಯಲ್ಲಿ ಸಿಂಧನೂರು ನಲ್ಲಿ ಶುಕ್ರವಾರದಿಂದ ೯ ದಿನಗಳ ದಸರಾ ಉತ್ಸವ ನಡೆಯಲಿದೆ, ಹಾಗೂ ಅ.೫ ರಂದು ಗೋಕಾಕ್ ಚಳುವಳಿ ಹಿನ್ನೋಟ ಮತ್ತು ಮುನ್ನೋಟ ಕಾರ್ಯಕ್ರಮವನ್ನು ಬೆಳಗ್ಗೆ ೧೦ ರಂದು ಹಮ್ಮಿಕೊಂ ಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ ಕೆ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಸಿಂಧನೂರು ತಾಲೂಕ ಮಟ್ಟದ ದಸರಾ ಅಚರಣೆ ಸರ್ಕಾರದ ಮಟ್ಟದಲ್ಲಿ ೯ ದಿನಗಳ ವರೆಗೆ ನಡೆಯಲಿದೆ, ದಸರಾ ಉತ್ಸವಕ್ಕೆ ಸರ್ಕಾರದಿಂದ ೭೫ ಲಕ್ಷ ಹಾಗೂ ಸ್ಥಳೀಯ ದೇಣಿಗೆಯಿಂದ ೫೦ ಲಕ್ಷ ಒಟ್ಟು ೧.೫೦ ಕೋಟಿ ವೆಚ್ಚ ವಾಗಲಿದೆ, ೯ ದಿನಗಳಲ್ಲಿ ವಿವಿಧ ಕಾರ್ಯಕ್ರಮ ನಡೆಸಲಾಗುತ್ತದೆ, ಸಾಹಿತ್ಯ ದಸರಾ, ಮಹಿಳಾ ದಸರಾ, ರೈತ ದಸರಾ, ನೌಕರರ ದಸರಾ, ಕ್ರೀಡಾ ದಸರಾ, ಕಲಾ ದಸರಾ, ಯುವ ದಸರಾ, ಹಾಗೂ ಜಂಬೂ ಸವಾರಿ ಏರ್ಪಡಿಸಲಾಗಿದೆ ಎಂದರು.
ಅ.೫ ರಂದು ಗೋಕಾಕ ಚಳುವಳಿ ಹಿನ್ನೋಟ ಮತ್ತು ಮುನ್ನೋಟದ ಕಾರ್ಯಕ್ರಮ ಕೃಷಿ ವಿವಿ ಆವರಣದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಅವರು ಉದ್ಘಾಟಿಸಲಿದ್ದಾರೆ, ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ, ಮೆರವಣಿಗೆ ಬಸವೇಶ್ವರ ವೃತ್ತದಿಂದ ಕೃಷಿ ವಿವಿವರೆಗೆ ನಡೆಯಲಿದೆ, ವಿವಿಧ ಕಲಾ ತಂಡಗಳು ಭಾಗವಹಿಸಲಿವೆ,
ಈ ಕಾರ್ಯಕ್ರಮಕ್ರಮಕ್ಕೆ ೧ ಕೋಟಿ ಖರ್ಚು ಮಾಡುತ್ತಿದ್ದು, ಸರ್ಕಾರದಿಂದ ೭೦ ಲಕ್ಷ ಹಾಗೂ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರಿಂದ ೩೦ ಲಕ್ಷ ಒಟ್ಟು ೧ ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರಿಗೆ ಊಟ, ಹಾಗೂ ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವು ಕುಮಾರ, ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್, ಸಚಿವ ಎನ್ ಎಸ್ ಬೋಸರಾಜು ಸೇರಿ ಶಾಸಕರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಅವರು ನೇತೃತ್ವದಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ೩ ಗೋಷ್ಠಿಗಳು ನಡೆಯಲಿವೆ, ಗೋಕಾಕ ಚಳವಳಿ ಹಿನ್ನೋಟ, ಹಾಗೂ ಮುನ್ನೋಟ, ಮತ್ತು ಕವಿ ಗೋಷ್ಠಿ ನಡೆಯಲಿದೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಮಾತನಾಡಿ, ಅ.೪ ಮತ್ತು ೫ ರಂದು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಒಟ್ಟು ೪೬ ಸೆಕ್ಷರ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ, ಸಿಂಧನೂರಿನಲ್ಲಿ ೧೪ ಸೆಕ್ಟರ್, ಮಾನವಿಯಲ್ಲಿ ೧೧ ಸೆಕ್ಟರ್ ಹಾಗೂ ರಾಯಚೂರಿನಲ್ಲಿ ೧೯ ಸೆಕ್ಟರ್ ಮಾಡಲಾಗಿದೆ ಎಂದರು.
೩ ಎಎಸ್‌ಪಿ, ೧೩ ಡಿಎಸ್‌ಪಿ, ೫೫ ಇನ್ಸ್ಪೆಕ್ಟರ್, ೧೪೦ ಸಬ್ ಇನ್ಸ್ಪೆಕ್ಟರ್, ೩೦೦ ಅಡಿಷನ್ ಇನ್ಸ್ಪೆಕ್ಟರ್, ೧೭೦೦ ಪೋಲಿಸ್ ಪೇದೆಗಳು, ೨೦೦ ಮಹಿಳಾ ಪೋಲಿಸರು, ೧೩ ಡಿಎಆರ್ ಮತ್ತು ೫ ಕೆಎಸ್‌ಆರ್‌ಪಿ ತುಕಡಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಇದ್ದರು.