ರಾಯಚೂರು. ಗಣೇಶ ಹಬ್ಬದ ಪ್ರಯುಕ್ತ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು 5ನೇ ದಿನದಂದು ಸಾಮೂಹಿಕ ವಾಗಿ ನಗರದ ಖಾಸಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ನಗರದ ವಿವಿಧ ಬಡಾವಣೆ ಹಾಗೂ ರಸ್ತೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು
5ನೇ ದಿನದಿಂದ ಒಟ್ಟು 126 ಗಣೇಶ ಮೂರ್ತಿ ಗಳನ್ನು ವಿಸರ್ಜನೆ ಮಾಡಲಾಯಿತು.
5ನೇ ದಿನದಂದು ಗಣೇಶ ಸಮಿತಿಗಳಿಂದ ವಿಶೇಷ ಪೂಜೆ ಸಲ್ಲಿಸಿ ಅನ್ನ ದಾಸೋಹ ಮಾಡಲಾ ಯಿತು. ನಂತರ ಸಂಜೆಯಿಂದ ಗಣೇಶ ಮೂರ್ತಿಗಳ ಬೃಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್‌ಗೆ ಯುವಕ, ಯುವತಿಯರು, ಮಕ್ಕಳು ಮತ್ತು ಮಹಿಳೆಯರು ಕುಣಿದು ಕುಪ್ಪಳಿಸಿದರು.
ಶನಿವಾರ ಸಂಜೆಯಿಂದ ಆರಂಭವಾದ ಮೆರವಣಿಗೆ ಭಾನುವಾರ ಬೆಳಗ್ಗೆ 11 ಗಂಟೆಯವರೆಗೆ ನಡೆಯಿತು.
ನಗರದ ಚಂದ್ರಮೌಳೇಶ್ವರ ವೃತ್ತದ ಮೂಲಕ ಪಟೇಲ್ ರಸ್ತೆ, ಸರಾಫ್ ಬಜಾರ್, ತೀನ್ ಖಂದೀಲ್, ಪೇಟ್ಲಾ ಬ್ರಿಜ್, ಗಂಗಾ ನಿವಾಸದ ವೃತ್ತದ ಮೂಲಕ ಖಾಸಬಾವಿಯಲ್ಲಿ ವಿಸರ್ಜನೆ ಮಾಡಲಾಯಿತ್ತು.
ಖಾಸಬಾವಿ ಸುತ್ತಲೂ ವಿಸರ್ಜನೆ ಮಾಡಲು ತಂದಿದ್ದ ಗಣೇಶನನ್ನು ನೋಡಲು ಜನರು ಆಗಮಿಸಿದ್ದರು.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜಾಗೃತ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಯಿತು.