Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ವಾರದಲ್ಲಿ ಎರಡು ದಿನ ಲಿಂಗಸುಗೂರಿನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯದ ಕಲಾಪ ನಡೆಸಲು ಆದೇಶ

ವಾರದಲ್ಲಿ ಎರಡು ದಿನ ಲಿಂಗಸುಗೂರಿನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯದ ಕಲಾಪ ನಡೆಸಲು ಆದೇಶ

ರಾಯಚೂರು. ಸಿಂಧನೂರಿನಲ್ಲಿ ಕಾರ್ಯನಿರ್ವ ಹಿಸುತ್ತಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯದ ಕಲಾಪಗಳನ್ನು ವಾರದಲ್ಲಿ ಎರಡು ದಿನ ಶುಕ್ರವಾರ ಮತ್ತು ಶನಿವಾರದಂದು  ಲಿಂಗಸುಗೂರಲ್ಲಿ ಕಾರ್ಯನಿರ್ವಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‍ ಕೆ.ಎಸ್‍ ಭರತ್‍ ಅವರು ಆದೇಶ ಹೊರಡಿಸಿದ್ದಾರೆ.

ಎರಡನೇ ಶನಿವಾರ ಬಂದಾಗ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಲಾಪಗಳನ್ನು ಲಿಂಗಸುಗೂರಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ಮಂಜೂರಾತಿಗೆ ವಕೀ ಲರ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿ ಸಿದ್ದಾರೆ.

ವಕೀಲರ ಸಂಘದ ಅಧ್ಯಕ್ಷ ಆಶಿಕ್‍ಅಹ್ಮದ ನೇತೃತ್ವದ ತಂಡ ಸುಪ್ರೀಂಕೋರ್ಟ್ ವಿಶ್ರಾಂತ ನಾಯಮೂರ್ತಿ ಶಿವರಾಜ ಪಾಟೀಲ, ಹೈಕೋ ರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ. ವರಲೆ, ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾ ಧೀಶ ರವಿ.ಎಸ್‍. ಹೊಸಮನಿ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಕಾರ್ಯದರ್ಶಿ ಕೆ.ಟಿ ನಾಯ್ಕ ಸೇರಿದಂತೆ ಇತರರನ್ನು ಉದ್ಘಾಟನೆಗೆ ಆಹ್ವಾನಿಸಲಾಯಿತು.

Megha News