ರಾಯಚೂರು: ನ.12-ಮುಂದಿನ ವರ್ಷ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ. 100% ರಷ್ಟು ಫಲಿತಾಂಶವು ಬರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಮ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ನಗರದ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರಾ ಶಿಕ್ಷಣಧಿಕಾರಿಗಳ ಕಛೇರಿ ವತಿಯಿಂದ ತಾಲೂಕಿನ ಎಲ್ಲಾ ಸರ್ಕಾರಿ. ಅನುದಾನಿತ. ಖಾಸಗಿ ಪ್ರೌಢ ಶಾಲೆಗಳ ಮುಖ್ಯ ಗುರುಗಳಿಗೆ 2024-25ನೇ ಸಾಲಿನ SSLC ವಿದ್ಯಾರ್ಥಿಗಳ ಫಲಿತಾಂಶ ಉತ್ತಮಪಡಿಸಲು ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಕಡ್ಡಾಯವಾಗಿ ಬರಬೇಕು. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆದೇಶದಂತೆ 20ಅಂಶಗಳನ್ನು ಕಡ್ಡಾಯ ಪಾಲನೆ ಮಾಡಬೇಕು. 100 ವಿದ್ಯಾರ್ಥಿಗಳ ನೋಂದಣಿ ಮಾಡಿಸುವುದು.ಪರೀಕ್ಷಾ ಸುಧಾರಣೆ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
MDM ಹಾಜರಾತಿಯಂತೆ ದೈನಂದಿನ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು.
ಶಾಲೆಗೆ ನಿಯಮಿತವಾಗಿ ಹಾಜರಾಗದೇ ಇರುವ 10ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಮನವೊಲಿಸಿ ಅಂತಹ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿವಹಿಸಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಬಗ್ಗೆ ಕ್ರಮ ಜರುಗಿಸಲು ಸೂಚಿಸಲಾಯಿತು.
ಮುಖ್ಯ ಗುರುಗಳು ವಿಶೇಷ ತರಗತಿಗಳನ್ನು ಕಡ್ಡಾಯವಾಗಿ ವೀಕ್ಷಿಸಿ ದಾಖಲೆಗಳನ್ನು ಸಂಗ್ರಹಿಸಬೇಕು. ಇಲಾಖೆ ವತಿಯಿಂದ ಈ ಹಿಂದೆ ನಡೆಸುವ ಮಾದರಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡಿ ಕೊಡುವುದು. ಶಾಲೆಯ ಹಾಗೂ ತಾಲೂಕಿನ SSLC ಫಲಿತಾಂಶ 100 ಮಾಡುವುದು ತಪ್ಪಿದಲ್ಲಿ ನೇರ ಹೊಣೆ ಮುಖ್ಯ ಗುರುಗಳೇ ಎಂದು ತಿಳಿಸಿದರು. SSLC ಫಲಿತಾಂಶ ಉತ್ತಮ ಪಡಿಸಲು ಕಡ್ಡಾಯ ನಿಯಮಗಳನ್ನು ಅನುಸರಿಸಬೇಕಾಗಿ ಎಲ್ಲಾ ಮುಖ್ಯ ಗುರುಗಳಿಗೆ ತಿಳಿಸಿದರು.
ಅನುದಾನಿತ,ಅನುದಾನರಹಿತ ಶಾಲೆಗಳು SSLC ಯ ಶೇ.100 ರಷ್ಟು ಫಲಿತಾಂಶ ಸಾಧಿಸಲು ಕಾಲಮಿತಿಯಲ್ಲಿ ನಿಯಮಬಧ್ಧ ಕ್ರಮಗಳನ್ನು ಕೈಗೊಂಡು ಉತ್ತಮ ಫಲಿತಾಂಶ ಸಾಧಿಸುತ್ತಿದ್ದು, ಸದರಿ ಶಾಲೆಗಳಲ್ಲಿ good practices ಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ರೂಢಿಸಿಕೊಂಡು ಉತ್ತಮ ಸಾಧನೆಗೈಯುವಂತೆ ಮುಖ್ಯೋಪಾಧ್ಯಾಯರಿಗೆ ನಿರ್ದೇಶಿಸಲಾಯಿತು.
ಈ ಸಂದರ್ಭದಲ್ಲಿ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ
ಚಂದ್ರಶೇಖರ ಭಂಡಾರಿ, ಡಿವೈಪಿಸಿ ಈರಣ್ಣ ಕೋಸಗಿ ಹಾಗೂ ಶಿಕ್ಷಣಾಧಿಕಾರಿಗಳು , ಅಕ್ಷರ ದಾಸೋಹ ಕಾರ್ಯಕ್ರಮ ಕಣ್ಣನ್ ಹಾಗೂ ರಾಯಚೂರು ತಾಲೂಕು ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.