ರಾಯಚೂರು ಮಾ.12 – ತಾಲೂಕಿನ ಕಲ್ಮಲಾ ಗ್ರಾಮದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಕೆರೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಕೆರೆ ಅನುಷ್ಠಾನ ಮಾಡುವ ಅಧಿಕಾರಿಗಳೊಂದಿಗೆ ಸಿಇಓ ಅವರು ಚರ್ಚೆಸಿ ಬಾಕಿಯಿರುವ ಕೆರೆ ಕಾಮಗಾರಿಯನ್ನು ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅತಿ ಮುಖ್ಯವಾಗಿ ಕೆರೆಯಲ್ಲಿ ಸ್ಟೋನ್ ಪೀಚಿಂಗ್, ಮರಂ ಹಾಕಿ ಸಮತಟ್ಟು ಮಾಡಬೇಕು ಹಾಗೂ ಕೆರೆಗೆ ಸಂಬಂಧಪಟ್ಟಿರುವ ಎಲ್ಲಾ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಅವರಿಗೆ ಸೂಚಿಸಿದರು.
ಏಪ್ರಿಲ್ ಮೊದಲ ವಾರದಲ್ಲಿ ಕೆನಾಲ್ ಮುಖಾಂತರ ನೀರು ಹರಿಸುವ ವೇಳೆಗೆ ಕಾಮಗಾರಿಯು ಪೂರ್ಣಗೊಳಿಸಿ ಕೆರೆಯನ್ನು ಭರ್ತಿ ಮಾಡಬೇಕು. ಈ ಕೆರೆ ಮೇಲೆ ಅವಲಂಬಿತರಾದ ಜನ, ಜಾನುವಾರುಗಳಿಗೆ ಕುಡಿಯುವದಕ್ಕೆ ನೀರು ಲಭ್ಯವಾಗುವಂತೆ ಅಗತ್ಯ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.
ನಂತರ ಕಲ್ಮಲಾ ರಸ್ತೆ ಮಾರ್ಗ ಮಧ್ಯದಲ್ಲಿ ರೈತರು ಹೊಲದಲ್ಲಿ ಮೇಣಸಿನಕಾಯಿ ಬಿಡಿಸುವ ಕೆಲಸ ಮಾಡುವದನ್ನು ಗಮನಿಸಿ ಸಿಇಓ ಅವರು ಅವರ ಬಳಿಗೆ ತೆರಳಿ ಗ್ರಾಮ ಪಂಚಾಯತಿಯಿಂದ ನಿಮಗೆ ನರೇಗಾದಡಿ ಕೆಲಸ ನೀಡಲಾಗುತ್ತಿದಿಯೇ ಎಂದು ಪ್ರಶ್ನಿಸಿದರು.? ಕೂಲಿಕಾರರು ಸದ್ಯ ನಮಗೆ ರೈತರ ಹೊಲಗಳಲ್ಲಿ ಮೇಣಸಿನಕಾಯಿ ತೆಗೆಯುವ ಕೆಲಸವಿದೆ. ಇದು ಮುಗಿದ ನಂತರ ನರೇಗಾದಡಿ ಕೆಲಸ ನೀಡುವಂತೆ ಸಿಇಒ ಅವರಿಗೆ ಮನವಿ ಮಾಡಲಾಯಿತು.
ಗ್ರಾಮ ಪಂಚಾಯತಿ ಪಿಡಿಒಗೆ ಜನರಿಂದ ಕೆಲಸಕ್ಕಾಗಿ ಬೇಡಿಕೆ ಸಂಗ್ರಹಿಸಿ ಫಾರಂ 6 ಭರ್ತಿ ಮಾಡಲು ಕ್ರಮವಹಿಸಬೇಕು. ನಂತರ ಪಂಚಾಯತಿ ಕಡೆಯಿಂದ ನರೇಗಾದಡಿ ಸಿಗುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳು ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯಗಳ ಮಾಹಿತಿ ಜನರಿಗೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಲು ಪ್ರೇರಿಪಿಸಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಭು ಚವ್ಹಾಣ, ಜೆಇ ದೊಡ್ಡಬಸಪ್ಪ, ಶಾಖಾಧಿಕಾರಿಗಳು, ಪಿಡಿಓ, ಕಾರ್ಯದರ್ಶಿ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಇದ್ದರು.
Megha News > Local News > ಕಲ್ಮಲಾ ಗ್ರಾಮದ ಕುಡಿಯುವ ನೀರಿನಕೆರೆಗೆ ಜಿ.ಪಂ ಸಿಇಓ ಬೇಟಿ: ನೀರು ಭರ್ತಿಗೆ ಪಾಂಡ್ವೆ ಸೂಚನೆ
ಕಲ್ಮಲಾ ಗ್ರಾಮದ ಕುಡಿಯುವ ನೀರಿನಕೆರೆಗೆ ಜಿ.ಪಂ ಸಿಇಓ ಬೇಟಿ: ನೀರು ಭರ್ತಿಗೆ ಪಾಂಡ್ವೆ ಸೂಚನೆ
Tayappa - Raichur12/03/2025
posted on

Leave a reply