ರಾಯಚೂರು. ಪಿಡಿಒ ಪರೀಕ್ಷೆಗಳು ನಡೆದಿದ್ದು, ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದೆ, ಆದರೆ ಒಂದು ಕೊಠಡಿಯಲ್ಲಿ 12 ಪ್ರಶ್ನೆ ಪತ್ರಿಕೆ ಹಂಚಿಕೆ ಮಾಡಿ ಕೆಪಿಎಸ್‌ಸಿ ಎಡವಟ್ಟು ಮಾಡಿಕೊಂಡ ಘಟನೆ ಜಿಲ್ಲೆಯ ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ನಡೆದಿದೆ.
ಕೆಪಿಎಸ್‌ಸಿ ಎಡವಟ್ಟು ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಾ ಬಂದಿದ್ದು ಇದೀಗ, ಪಿಡಿಒ ಪರೀಕ್ಷೆಯಲ್ಲೂ ಸಹ ಕೆಪಿಎಸ್‌ಸಿ ಅರ್ಧಬಂರ್ಧ ಪ್ರಶ್ನೆ ಪತ್ರಿಕೆ ಹಂಚಿ ಎಡವಟ್ಟು ಮಾಡಿಕೊಂಡಿದೆ. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸಿಗದೇ ಕಂಗಾಲಾಗಿದ್ದಾರೆ.
ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದ್ರೆ, ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 12 ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಇದರಿಂದ ಅಭ್ಯರ್ಥಿಗಳು ಕೆಪಿಎಸ್‌ಸಿ ಅಭ್ಯರ್ಥಿ ಮೇಲ್ವಿಚಾರಕರ, ಹಾಗೂ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆ ಬೇರೆ ಜಿಲ್ಲೆಗಳಿಂದ ಅಭ್ಯರ್ಥಿಗಳು ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ಬರೆಯಲು ಆಗಮಿಸಿದ್ದು,
ಕೆಪಿಎಸ್‌ಸಿ ನಡೆ ಖಂಡಿಸಿ ಅಭ್ಯರ್ಥಿಗಳು ರಸ್ತೆಗಳಿದು ಸಿಂಧನೂರು ಕುಷ್ಟಗಿ ರಸ್ತೆ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಪೋಲಿಸರು ಮತ್ತು ತಹಶೀಲ್ದಾರ್ ಅರುಣ ಕುಮಾರ ಅವರು ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನಿಸಿದರು.
ಈ ವೇಳೆ ಅಭ್ಯರ್ಥಿ ವಿರುದ್ಧ ಪರೀಕ್ಷೆ ಬರೆಯುವರು ಬರೆಯಿರಿ. ಇಷ್ಟವಿಲ್ಲದವರು ಹೋಗಿ ಎಂದು ಅವಾಜ್ ಹಾಕಿದ್ದಾರೆ. ಇದರಿಂದ ಕೆರಳಿದ ಅಭ್ಯರ್ಥಿಗಳು ತಹಶೀಲ್ದಾರ್ ನಡೆಯನ್ನು ಖಂಡಿಸಿದರು.
Megha News > Local News > ಪಿಡಿಒ ಪರೀಕ್ಷೆ ಕೆಪಿಎಸ್‌ಸಿ ಎಡವಟ್ಟು, 24 ಪ್ರಶ್ನೆ ಪತ್ರಿಕೆ ಬದಲಿಗೆ 12 ಹಂಚಿಕೆ ಅಭ್ಯರ್ಥಿಗಳು ರಸ್ತೆ ತಡೆ ಪ್ರತಿಭಟನೆ
ಪಿಡಿಒ ಪರೀಕ್ಷೆ ಕೆಪಿಎಸ್‌ಸಿ ಎಡವಟ್ಟು, 24 ಪ್ರಶ್ನೆ ಪತ್ರಿಕೆ ಬದಲಿಗೆ 12 ಹಂಚಿಕೆ ಅಭ್ಯರ್ಥಿಗಳು ರಸ್ತೆ ತಡೆ ಪ್ರತಿಭಟನೆ
Tayappa - Raichur17/11/2024
posted on
Leave a reply