ದೇವದುರ್ಗ. ತಾಲೂಕಿನಾದ್ಯಂತವಾಗಿ ನಕಲಿ ನೋಟಿನ ಹಾವಳಿ ಮಿತಿಮೀರಿದೆ, ಜನಸಂದಣಿ ಗುರಿಯಾಗಿಸಿಕೊಂಡು ಖೋಟಾ ನೋಟುಗ ಳನ್ನು ಅಕ್ರಮವಾಗಿ ಚಲಾವಣೆ ಮಾಡುತ್ತಿರುವ ದಂಧೆ ತೆರೆಮೆರೆಯಲ್ಲಿ ನಿರಂತರವಾಗಿ ನಡೆಸಿದ್ದು ಇದಕ್ಕೆ ಅಂಗಡಿಗಳು ಮತ್ತು ಸಾರ್ವಜನಿಕರ ತೊಂದರೆ ಅನುಭವಿಸುವಂತಾಗಿದೆ.
ಇತ್ತೀಚೆಗೆ ಜಾಲಹಳ್ಳಿ ಪಟ್ಟಣದಲ್ಲಿ ಔಷಧ ಅಂಗಡಿಯಲ್ಲಿ 500 ಮುಖಬೆಲೆಯ ನಕಲಿ ನೋಟು ಬಂದಿದ್ದು, ಎಸ್‌ಬಿಐ ಶಾಖೆಯಲ್ಲಿ ಹಣ ಜಮಾ ಮಾಡಲು ಹೋದಾಗ ಖೋಣಾ ಎಂದು ಗೊತ್ತಾಗಿದೆ.
ಬ್ಯಾಂಕ್‌ನಲ್ಲಿ ನೋಟುಗಳ ಎಣಿಕೆ ಸಂದರ್ಭ ದಲ್ಲಿ ಹಣ ಏಣಿಕೆ ಮಾಡುವ ಯಂತ್ರಕ್ಕೆ ಹಾಕಿ ದಾಗ ನಕಲಿ ಎಂದು ತಿಳಿದು ಬಂದಿದೆ.
ಬ್ಯಾಂಕ್ ಅಧಿಕಾರಿಗಳು 500 ಮುಖ ಬೆಲೆಯ ನೋಟಿನ ಮೇಲೆ ಕೆಂಪು ಬಣ್ಣದ ಪೆನ್‌ನಿಂದ ಎರಡು ಗೆರೆ ಎಳೆದು ಖೋಟಾ ನೋಟು ಎಂದು ಬರೆದು ಹಣ ಜಮಾ ಮಾಡಲು ಬಂದ ಗ್ರಾಹಕನಿಗೆ ನೀಡಿದ್ದಾರೆ.
ಕೂಲಿ ಕಾರ್ಮಿಕರು, ರೈತರು ದಿನಗೂಲಿ ಮಾಡುವವರು ಇಂತಹ ಖೋಟಾ ನೋಟಿನ ಹಾವಳಿಯಿಂದ ತೊಂದರೆಗೀಡಾಗಿದ್ದಾರೆ.
ದಿನಕ್ಕೆ ದುಡಿಯುವುದೇ 200ರಿಂದ 300 ಮಾತ್ರ. ಇಂತಹ ಸ್ಥಿತಿಯಲ್ಲಿ 500 ಮುಖಬೆಲೆಯ ಒಂದು ಖೋಟಾ ನೋಟು ಬಂದರೆ ಜೀವನ ನಡೆಸಲು
ಕಷ್ಟಕರವಾಗಿದೆ.
ನಕಲಿ ನೋಟಿನ ಹಾವಳಿಯನ್ನು ತಡೆಗಟ್ಟಲು ಜಿಲ್ಲಾ ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ, ನಕಲಿ ನೋಟಿನ ಜಾಲ ಪತ್ತೆ ಹಚ್ಚಿ ಕಡಿವಾಣ ಹಾಕಬೇಕಿದೆ.