ರಾಯಚೂರು. ನಗರದ ಗೋಶಾಲಾ ರಸ್ತೆಗೆ ಹೊಂದಿಕೊಂಡಿರುವ 80 ಫೀಟ್ ರಸ್ತೆಗೆ ಸಚಿವ ಎನ್.ಎಸ್. ಭೋಸರಾಜು ಅವರ ಹೆಸರನ್ನು ನಾಮಕರಣ ಮಾಡಲು ಮಹಾ ನಗರ ಪಾಲಿಕೆ ಸಭೆಯಲ್ಲಿ ನಿರ್ಧರಿಸಿದ್ದನ್ನು ವಿರೋಧಿಸಿ ಮಹಾ ನಗರ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿನ್ನೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಗರದ ಗೋಶಾಲಾ ರಸ್ತೆಗೆ ಹೊಂದಿಕೊಂಡಿರುವ 80 ಫೀಟ್ ರಸ್ತೆಗೆ ಸಚಿವ ಎನ್.ಎಸ್. ಭೋಸರಾಜು ಅವರ ಹೆಸರನ್ನು ನಾಮಕರಣ ಮಾಡಿದ್ದಕ್ಕೆ ವಿರೋಧವಿದೆ.
ಈ ವಿಷಯವನ್ನು ಬಗ್ಗೆ ಅಜೆಂಡಾದಲ್ಲಿ ಅಳವಡಿ ಸದೇ ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ, ಅಜೆಂಡಾದಲ್ಲಿ ವಿಷಯವನ್ನು ಮಹಾ ನಗರ ಪಾಲಿಕೆ ಸದಸ್ಯರ ಗಮನಕ್ಕೆ ತಂದಿಲ್ಲ, ತಪ್ಪು ಮಾಹಿತಿಯನ್ನು ನೀಡಿ ತರಾತುರಿಯಲ್ಲಿ ಕೈಗೊಂಡಿರುವ ನಿರ್ಧಾರವಾಗಿವೆ ಎಂದು ದೂರಿದರು.
ನಗರದ ಗೋಶಾಲಾ ರಸ್ತೆಗೆ ಹೊಂದಿಕೊಂಡಿರುವ 80 ಫೀಟ್ ರಸ್ತೆಗೆ ಸಚಿವ ಎನ್.ಎಸ್. ಭೋಸರಾಜು ಅವರ ಹೆಸರನ್ನು ನಾಮಕರಣ ಮಾಡುವದಕ್ಕೆ ಆಕ್ಷೇಪಣೆ ಇರುವುದರಿಂದ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾ ನಗರಪಾಲಿಕೆ ಸದಸ್ಯರಾದ ಲಲಿತಾ ಕಡಗೋಲ್ ಆಂಜನೇಯ, ಈ ಶಶಿರಾಜ, ಎನ್‌ಕೆ. ನಾಗರಾಜ, ಉಮಾ ರವಿಂದ್ರ ಜಲ್ದಾರ್, ನವನೀತ, ಲಕ್ಷ್ಮೀ ಡಿ, ಸುಜಮ್ಮ, ವೆಂಕಟಮ್ಮ, ಬುಜ್ಜಮ್ಮ, ರೇಖಾ, ವಿ. ನಾಗರಾಜ, ನರಸರೆಡ್ಡಿ, ಇದ್ದರು.