ರಾಯಚೂರು: ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ, ಇತರೆ ಕೆಳ ಹಂತದ ಅಧಿಕಾರಿಗ ಳಿಗೆ ಹಾಗೂ ಗುತ್ತೇದಾರರಿಗೆ ಬ್ಲಾಕ್ ಮೇಲ್ ಮಾಡಿ ಹಣ ಕೀಳುವುದನ್ನೇ ಉಪ ಜೀವನವನ್ನಾ ಗಿಸಿಕೊಂಡ ಶರಣಪ್ಪ ರೆಡ್ಡಿ ಲಕಣಾಪುರ ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ತನಿಖೆಗೊಳ ಪಡಿಸಬೇಕು ಎಂದು ಭೀಮ್ ಆರ್ಮಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿ ಕಾರಿಗೆ, ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶರಣಪ್ಪರೆಡ್ಡಿ ಲಖಣಾಪುರ ತಂದೆ ವಿರುಪಣ್ಣ ಕೊಳ್ಳಿ ಸಾ, ಲಖನಾಪುರ ತಾ: ಜೇವರ್ಗಿ, ಸಾಮಾ ಜಿಕ ಹೋರಾಟಗಾರನೆಂದು ಹೇಳಿಕೊಂಡು ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಮೂಲತಃ ಹಣ ಕೀಳುವ ಕೀಳು ಭಾವನೆ ಉಳ್ಳವನಾಗಿ ರುತ್ತಾನೆ.ಈ ವ್ಯಕ್ತಿಯು ಸಾಮಾಜಿಕ ತೆರನಾದ ಸಮಸ್ಯೆಗಳಿಗೆ ಪೋಲಿಸ್ ಇಲಾಖೆಯ ಬಂದೋ ಬಸ್ತ್ ಪಡೆದು ತಹಶೀಲ್ದಾರ್ ಕಛೇರಿಯಾಗಲೀ ಅಥವಾ ಜಿಲ್ಲಾಧಿಕಾರಿಗಳ ಕಛೇರಿ ಆವರಣದ ಲ್ಲಿಯಾಗಲಿ ಹೋರಾಟ ಮಾಡಿದ ಒಂದೇ ಒಂದು ಉದಾಹರಣೆ ಈವರೆಗೂ ಇರುವುದಿಲ್ಲ.
ಶರಣಪ್ಪರೆಡ್ಡಿ ಲಕಣಾಪುರ ವಿರುದ್ಧ ಜಿಲ್ಲಾ ಪೋ ಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ಶರಣಪ್ಪ ರೆಡ್ಡಿ ಲಖಣಾಪುರ ವಿರುದ್ಧ ಈವರೆಗೆ ಕ್ರಮ ಜರುಗಿಸಿರುವುದಿಲ್ಲ. ಪೋಲೀಸರು ಈತನ ಜಾಡು ಹಿಡಿಯುವ ಕಾಯಕದಲ್ಲಿ ನಿರತರಾಗಿ ದ್ದರೂ, ದಿನಬಿಟ್ಟು ದಿನ ಅಜ್ಞಾತ ಸ್ಥಳಗಳಿಂದ ವಾಟ್ಸಪ್ ಮೂಲಕ ಅಧಿಕಾರಿಗಳಿಗೆ ಅಪೂರ್ಣ ಮಾಹೀತಿಯುಳ್ಳ ದೂರು ಸಲ್ಲಿಸುವ ಕಾಯಕ ದಲ್ಲಿ ನಿರತರಾಗಲು ಕೆಲ ಸಹಚರರನ್ನು ಬಳಸಿಕೊ ಳ್ಳುತ್ತಿದ್ದಾನೆ ಎಂದು ಆರೋಪಿಸಿದರು.
ತಮ್ಮ ಆದಾಯ ಮೂಲವಾಗಿರುವ ಕೆಲವರಿಂದ ಅಸ್ಪಷ್ಟ ದೂರು ಪಡೆದು ಅವುಗಳನ್ನು ತಡರಾತ್ರಿ ಯಲ್ಲಿಯೂ ವಾಟ್ಸಪ್ ಮೂಲಕ ಅಧಿಕಾರಿಗಳಿಗೆ ರವಾನೆ ಮಾಡುವ ಪ್ರವೃತ್ತಿ ಹೊಂದಿದ್ದಾನೆ.
ಸಾಮಾಜಿಕ ಹೋರಾಟಗಾರನಾದಲ್ಲಿ ಶರಣಪ್ಪ ರೆಡ್ಡಿ ಜನ ಸಮುದಾಯದಲ್ಲಿಯೇ ನೆಲೆಯೂರಿ ಸಾಕ್ಷಾಧಾರ ಸಮೇತ ಲಿಖಿತ ದೂರು ನೀಡಲಿ ಇದನ್ನು ಸಂಘಟನೆ ಸ್ವಾಗತಿಸುತ್ತದೆ ಎಂದರು.
ಕೇವಲ ವಾಟ್ಸಾಪ್ ದೂರಿಗೆ ಸೀಮಿತವಾಗಿ ಕಾರ್ಯಾಲಯಕ್ಕೆ ಆಗಮಿಸದೇ ಅಲ್ಲದೇ ಕನಿಷ್ಠ ಮನವಿ ಪತ್ರವೂ ನೀಡದೇ ಸ್ವ ಹಿತಾಸಕ್ತಿಗಾಗಿ ಕೇವಲ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಕಿರುಕುಳ ನೀಡುವ ದುರ್ಬುಧ್ದಿ ಹೊಂದಿರುವ ಇಂತಹ ಬ್ಲಾಕ್ ಮೇಲ್ ಹೋರಾಟಗಾರನಿಂದ ಅಭಿವೃಧ್ದಿ ವಿಚಾರಕ್ಕೂ ಹಿನ್ನೆಡೆಯುಂಟಾಗುವ ಸಾಧ್ಯತೆ ಇದೆ, ಈ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕಲ್ಬುರ್ಗಿ ಜಿಲ್ಲಾಢಳಿತ ವತಿಯಿಂದ ಈಗಾಗಲೇ ಗಡಿಪಾರಾಗಿರುವ ಇಂತಹ ನಕಲೀ ಹೋರಾಟಗಾ ರನ ಮೇಲೆ ಹಲವಾರು ಪ್ರಕರಣ ದಾಖಲಾಗಿ ದ್ದರೂ ಈವರೆಗೂ ಇವನನ್ನು ಬಂಧಿಸಿಲ್ಲ,
ಸುಳ್ಳುದೂರು ನೀಡಿ ಬ್ಲಾಕ್ ಮೇಲ್ ಮಾಡುವ ಇವನನ್ನು ತಕ್ಷಣವೇ ಬಂಧಿಸದಿದ್ದಲ್ಲಿ ಕಛೇರಿ ಆವರಣದಲ್ಲಿಯೇ ಧರಣಿ ಸತ್ಯಾಗ್ರಹ ನಡೆಸಲಾ ಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಪ್ರವೀಣ ಕುಮಾರ, ತಾಲೂಕ ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಇದ್ದರು.