Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime News

ಪೊಲೀಸ್ ವಸತಿ ಗೃಹದಲ್ಲಿ ೧೦ ಲಕ್ಷ ರೂ ಕಳ್ಳತನ: ಮೂರು ಜನ ಆರೋಪಿಗಳನ್ನು ಪೊಲೀಸರು ಯಶಸ್ವಿ

ಪೊಲೀಸ್ ವಸತಿ ಗೃಹದಲ್ಲಿ ೧೦ ಲಕ್ಷ ರೂ ಕಳ್ಳತನ: ಮೂರು ಜನ ಆರೋಪಿಗಳನ್ನು ಪೊಲೀಸರು ಯಶಸ್ವಿ

ರಾಯಚೂರು, ಮೇ.೨೯-ನಗರದ ಮಾರ್ಕೆಟ್‌ಯಾರ್ಡ್ ಪೋಲಿಸ್ ಠಾಣೆ ವಸತಿ ಗೃಹದಲ್ಲಿರುವ ಮಹಿಳಾ ಪೋಲಿಸ್ ಪೇದೆಯ ಮನೆಯೊಂದರಲ್ಲಿ ೧೦ ಲಕ್ಷ ರೂ ಕಳ್ಳತನ ನಡೆದ ಘಟನೆಗೆ ಸಂಬAಧಿಸಿದAತೆ ಪೊಲೀಸರು ಮೂರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮಾರ್ಕೆಟ್ ಯಾರ್ಡ್ ಪೋಲಿಸರ ವಸತಿ ಗೃಹದಲ್ಲಿನ ಮಹಾದೇವಿ ಎನ್ನುವ ಮಹಿಳಾ ಪೋಲಿಸ್ ಪೇದೆಯ ಮನೆಯಲ್ಲಿ ಮೇ.೨೩ ರಂದು ಕಳ್ಳತನ ನಡೆದಿತ್ತು. ಈಕುರಿತು ಪೋಲಿಸ್ ಪೇದೆ ಮಹಾದೇವಿ ಅವರ ಮನೆಯಲ್ಲಿದ್ದ ಸುಮಾರು ೧೦ ಲಕ್ಷ ರೂ ನಗದು ಹಣ ಆಗಿರುವಕುರಿದು ಮಾರ್ಕೆಟ ಯಾರ್ಡ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆತಂಡವನ್ನು ರಚಿಸಲಾಗಿತ್ತು . ತಂಡ ಪೊಲೀಸ್ ವಸತಿ ಗೃಹದಲ್ಲಿ ಸೂಪರ್ ವೈಜರ್ ಆಗಿ ಕೆಲಸ ಮಾಡುತ್ತಿದ್ದ ಜಲಾಲನಗರದ ನಿವಾಸಿ ವಿಶ್ವನಾಥ ಅಲಿಯಾಸ ವಿಶ್ವ, ಬೇಲ್ದಾರ ಆಗಿ ಕೆಲಸ ನಿರ್ವಹಿಸುತ್ತಿದ್ದ ನವಾಬ ಗಡ್ಡದನಿವಾಸಿ ಪಿ.ಗೋವಿಂದ ಅಲಿಯಾದ ವಪ್ಪು,ಪ್ಲಂಬರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಡ್ಡಿಪೇಟೆ ನಿವಾಸಿ ಮಹೇಶ ಎಂಬುವರನ್ನುಬAಧಿಸಿ ಬಂದಿತರಿAದ ೮ಲಕ್ಷ ೭ ಸಾವಿರ ರೂ ನಗದು ಹಣವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದಲ್ಲಿ ಪಶ್ಚಿಮ ಠಾಣೆ ಸಿಪಿಐ ನಾಗರಾಜು ಮೇಕಾ, ಪಿಎಸ್‌ಐ ಅಮಿತಾ,ಚಂದ್ರಪ್ಪ, ಸಿಬ್ಬಂದಿಗಳಾದ ಅಮರೇಶ,ಗುರುಸ್ವಾಮಿ, ಶರಣಬಸವ, ಪ್ರವೀಣ, ಹನುಮಂತ್ರಾಯ ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿ ೧೨ ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಮಾಡಿರುವ ಪೊಲೀಸರ ಕಾರ್ಯವನ್ನು ಎಸ್‌ಪಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Megha News