ಸಿಂಧನೂರು.ತಾಲೂಕಿನ ತುರವಿಹಾಳ ಪೋಲಿಸ್ ಠಾಣೆಯ ಎಸ್.ಬಿ ಹುದ್ದೆ ನಿರ್ವಹಿಸುತ್ತಿದ್ದ ಪೆದೆ ಬಸವರಾಜ ಅವರನ್ನು ಲಂಚದ ಆರೋಪದ ಆಡಿಯೋ ವೈರಲ್ ವಿಷಯವಾಗಿ ಅಮಾನತ್ತು ಗೊಳಿಸಿ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ನಿಖಿಲ್ ಬಿ ಆದೇಶಿಸಿದ್ದಾರೆ.
ತುರವಿಹಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಉಮಲೂಟಿ ಗ್ರಾಮದಲ್ಲಿ ತುರವಿಹಾಳ ಠಾಣೆಯ ಪೆದೆ ಬಸವರಾಜ ಸಿ.ಎಚ್ .ಸಿ ೩೫೮ (ಗುಪ್ತ ಮಾಹಿತಿ ಸಂಗ್ರಹಿಸುವ ) ಎನ್ನುವವರು ಅಕ್ರಮ ಚಟುವಟಿಕೆಗಳನ್ನು ನಡೆಸುವವರೊಂದಿಗೆ ಲಂಚ ಕೇಳಿದಾಗ ,’ನನಗೆ ಎರಡು ಸಾವಿರ ರೂ ಮಾತ್ರ ಕೊಡಲಾಗುತ್ತದೆ ಅದಕ್ಕಿಂತ ಹೆಚ್ಚಿನ ಶಕ್ತಿ ನನ್ನಲ್ಲಿ ಇಲ್ಲ ’ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪೆದೆ ಬಸವರಾಜ ನನ್ನು ಸೇವೆಯಿಂದ (ಶಿಸ್ತು ನಡುವಳಿ ) ( ತಿದ್ದುಪಡಿ )೨೦೨೨ ರ ನಿಯಮ ೫ ರ ರಿತ್ಯ ಇಲಾಖೆ ವಿಚಾರಣೆ ಬಾಕಿ ಉಳಿಸಿಕೊಂಡು ಈ ಕೂಡಲೇ ಸೇವೆಯಿಂದ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ನಿಖಿಲ್ ಬಿ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
Megha News > Local News > ಪೋಲಿಸ್ ಪೆದೆ ಬಸವರಾಜ ಸೇವೆಯಿಂದ ಅಮಾನತ್ತು.
ಪೋಲಿಸ್ ಪೆದೆ ಬಸವರಾಜ ಸೇವೆಯಿಂದ ಅಮಾನತ್ತು.
Tayappa - Raichur15/12/2023
posted on
Leave a reply