ರಾಯಚೂರು. ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು 0-18ವರ್ಷದ ಪೋಷಣೆ ಮತ್ತು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಅವರು ಮಾರ್ಗದರ್ಶನದಂತೆ ಇಂದು ಬೆಳಿಗ್ಗೆ 11.30ಗಂಟೆಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಮತ್ತು ಮಕ್ಕಳ ಸಹಾಯವಾಣಿ ಘಟಕ ರಾಯಚೂರು ಸಹಯೋಗದಲ್ಲಿ ರಾಯಚೂರಿನ ಕೇಂದ್ರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಭಿಕ್ಷಾಟನೆ, ಚಿಂದಿ ಆಯಿಸುವ ಹಾಗೂ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ಮಾಡಲಾಯಿತು.
ಈ ಕಾರ್ಯಾಚರಣೆಯಲ್ಲಿ 9 ಬಾಲಕಿಯರು ಹಾಗೂ 1 ಬಾಲಕ ಸೇರಿದಂತೆ ಒಟ್ಟು 10 ಮಕ್ಕ ಳನ್ನು ರಕ್ಷಿಸಿ ಸರ್ಕಾರಿ ಬಾಲ ಮಂದಿರಗಳಿಗೆ ದಾಖಲಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಪೋಲೀಸ್ ವಿಶೇಷ ಮಕ್ಕಳ ಘಟಕದ ಬಸವರಾಜ, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ನಿರ್ದೇಶಕರಾದ ಮಂಜುನಾಥ ರೆಡ್ಡಿ, ಮಹಿಳಾ ಪೊಲೀಸ ಠಾಣೆಯ ಪಿಎಸ್ಐ ಲಕ್ಷ್ಮಿ, ರಕ್ಷಣಾಧಿಕಾರಿ ಕಿರಲಿಂಗಪ್ಪ, ಕಾನೂನು ಪರಿವೀಕ್ಷಣಾಧಿಕಾರಿ ಶಿವರಾಜ, ಸಮಾಜ ಕಾರ್ಯಕರ್ತ ತಿಕ್ಕಯ್ಯ, ದಿನೇಶ ಕುಮಾರ್ ಔಟ್ರಿಚ್ ವರ್ಕರ್, ಈರಮ್ಮ ಔಟ್ರಿಚ್ ವರ್ಕರ್ ಮತ್ತು ದೇವಮ್ಮ, ಬಜಾರ ಪೊಲೀಸ್ ಠಾಣೆಯ ಪಿಸಿ ವೆಂಕಣ್ಣ ಭೋವಿ, ಪಶ್ಚಿಮ ಪೊಲೀಸ್ ಠಾಣೆ ಪಿಸಿ ವೈ.ಸುರೇಶ, ಮೇಲ್ವಿಚಾರಕರು, ಮಕ್ಕಳ ಸಹಾಯವಾಣಿ ಘಟಕ ಇವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.