Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ರಾಮಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಭಾಗವಹಿಸುವುದನ್ನು ಖಂಡಿಸಿ ಪ್ರತಿಭಟನೆ

ರಾಮಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಭಾಗವಹಿಸುವುದನ್ನು ಖಂಡಿಸಿ ಪ್ರತಿಭಟನೆ

ರಾಯಚೂರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವ ಹಿಸುವುದನ್ನು ವಿರೋಧಿಸಿ ಸಿಪಿಐ (ಎಂಎಲ್) ರೆಡ್‌ ಸ್ಟಾರ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೇಶವು ಸ್ವಾತಂತ್ರ್ಯ, ಸಾರ್ವಭೌಮ, ಜಾತ್ಯಾತೀತ ಮತ್ತು ಸಮಾಜವಾದಿ ಆಶಯವನ್ನು ಹೊಂದಿರು ವಂತಹ ದೇಶವಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರಗಳು ಒಂದು ಧರ್ಮದ ವಕಾಲತ್ತುವಹಿಸುತ್ತಿರುವುದನ್ನು ಖಂಡಿಸಿದರು.
ದೇಶಾದ್ಯಂತ ನಿರುದ್ಯೋಗ, ಹಸಿವು, ಬಡತನ, ಬೆಂಬಲ ಬೆಲೆ, ಆರೋಗ್ಯದ ಸಮಸ್ಯೆ ಸೇರಿ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸು ತ್ತಿರುವ ಸಂದರ್ಭದಲ್ಲಿ ಜನರ ನೆರವಿಗೆ ಬಾರದೆ ಜನರಿಂದ ಸಂಗ್ರಹಿಸಲ್ಪಟ್ಟ ತೆರಿಗೆಯಿಂದ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟುವುದಕ್ಕೆ ಬಳಸುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾದ್ಯಕ್ಷ ಜಿ. ಅಮರೇಶ ಮಾತನಾಡಿ,
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜಾತ್ಯಾತೀತ ವಿರೋಧಿ, ಆದಿವಾಸಿ ವಿರೋಧಿ ಹಾಗೂ ದಲಿತ ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ದೇಶದ ಸಂಪನ್ಮೂಲ, ಸೇವಾ ವಲಯಗಳನ್ನು ಕಾರ್ಪೊರೇಟರ್ ಲಾಭಕ್ಕೆ ತಕ್ಕಂತೆ ಖಾಸಗೀಕರ ಣಗೊಲಿಸುತ್ತಿದೆ ಎಂದರು.
ದೇಶದ ಅಭಿವೃದ್ಧಿಗೆ ಮಾರಕವಾದ ನೀತಿಗಳನ್ನು ಜಾರಿಗೆ ತರುವು ಮೂಲಕ ಬಂಡವಾಳಿಗರ ಬಂಡ ವಾಳ ದುಪ್ಪಟ್ಟಾಗುತ್ತಿದ್ದು ಕೂಲಿ ಕಾರ್ಮಿಕರ ರೈತರ ಬದುಕು ಹೀನಾಯವಾಗುತ್ತಿದೆ, ಇದೀಗ ಟ್ಯಾಕ್ಸಿ ಲಾರಿ ಚಾಲಕರ ಕಾರ್ಮಿಕ ವಿರೋಧಿ ರಿಲಯನ್ಸ್, ಎಸ್‌ಆರ್ ಎಂಬ ಕಂಪನಿಗಳ ಪರ ವಾದ ವಿದೇಯಕವನ್ನು ಮಂಡಿಸುವುದರ ಮೂಲಕ ಅಮಾಯಕ ಚಾಲಕರನ್ನು ಬಲಿಕೊ ಡುವ ಕೆಲಸದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆಪಾದಿಸಿದರು‌.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಹಿಂದೂ ಮೂಲಭೂತವಾ ದವನ್ನು ಗಟ್ಟಿಗೊಳಿಸುತ್ತಾ, ರಾಷ್ಟ್ರೀಯ ಸರಕು ಸಾಗಾಣಿಕೆಯ ಖಾಸಗೀಕರಣ ಹಾಗೂ ಮುಸ್ಲಿಂ ವಿರೋಧಿ ರಾಜಕಾರಣ ಷಡ್ಯಂತರವಾಗಿದೆ, ಮನೆ ಮನೆಗೆ ಅಕ್ಷತೆಯ ಹೆಸರಲ್ಲಿ ಅಮಾಯಕ ಜನತೆ ಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಈ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಜಾರಿಯಲ್ಲಿಯೇ ಮಗ್ನವಾಗಿದ್ದು, ಸಾಮಾನ್ಯ ಜನರ ಸಮಸ್ಯೆಗಳಿಗೆ ಹಾಗೂ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಜಾತಿ ಗಣಿತಿ ವರದಿಯನ್ನು ಬಿಡುಗಡೆ ಮಾಡದೆ ತಮ್ಮದೇ ಪಕ್ಷದ ಕೆಲವೇ ಕೆಲವು ಮಂತ್ರಿಗಳು ಮತ್ತು ಜಾತಿವಾದಿ ಶಾಸಕರುಗಳ ನಿರ್ದೇಶನದಂತೆ ತಡೆಹಿಡಿಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಡಿ. ಅಮೀರ ಅಲಿ, ಚಿನ್ನಪ್ಪ ಕೊಟ್ರಿಕಿ, ಎಂ.ಗಂಗಾಧರ, ಆರ್. ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಜಿ.ಅಡವಿರಾವ್, ಅಜೀಜ್ ಜಾಗೀರದಾರ್, ಆದಿ ನಗನೂರು, ಸಂತೋಷ ದಿನ್ನಿ, ತಿಪ್ಪರಾಜ ಗೆಜ್ಜಲಗಟ್ಟಾ, ವೆಂಕಟೇಶ ನಾಯಕ, ಯಲ್ಲಪ್ಪ ಊಟಕನೂರು, ಗಿರಿಲಿಂ ಗಸ್ವಾಮಿ ಸೇರಿದಂತೆ ಅನೇಕರು ಕಾರ್ಯತರ್ಕರು ಭಾಗವಹಿಸಿದ್ದರು.

Megha News