ರಾಯಚೂರು.ನಗರದ ಜೆಸ್ಕಾಂ ನಗರ ವಿಭಾಗ ಕಚೇರಿಯಲ್ಲಿ ಕೆಲಸ ಮಾಡುವ ವೇಳೆ ಕಿರಿಯ ಇಂಜಿನೀಯರ್ ಆನಂದ ಮೇಲೆ ಹಲ್ಲೆಗೆ ಗುತ್ತೆದಾರ ಮುಂದಾಗಿರುವುದನ್ನು ವಿರೋಧಿಸಿ ಜೆಸ್ಕಾಂ ನೌಕರರು ದಿಢೀರ್ನೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿದ್ಯುತ್ ಗುತ್ತಿಗೆದಾರ ಮೊಹ್ಮದ್ ಮಾಜಾರ್ ಎಂಬಾತ ಜೆಸ್ಕಾಂ ಕಿರಿಯ ಇಂಜಿನಿಯರ್ ಆನಂದ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ, ಈ ವಿಷಯ ತಿಳಿಯುತ್ತಿದ್ದಂತೆ ಜೆಸ್ಕಾಂ ನೌಕರರು ಏಕಾಏಕಿ ಕಚೇರಿಯ ಮುಖ್ಯ ಧ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದ ಮೊಹ್ಮದ್ ಮಾಜಾರ್ ವಿರುದ್ದ ಕೇಸ್ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜೆಸ್ಕಾಂ ನೌಕರರು ಭಾಗವಹಿಸಿದ್ದರು.