ರಾಯಚೂರು. ರಾಯಕೆಮ್ ಮೆಡಿಕೇರ್ ನಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಯಕೆಮ್ ಮೆಡಿಕೇರ್ ಸಾಫ್ & ವರ್ಕರ್ಸ್ ಯೂನಿಯನ್ ಎಐಯುಟಿಯುಸಿ ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು.
ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು,
ಇತ್ತೀಚೆಗೆ ವಜಾಗೊಂಡ 5 ಜನ ಗುತ್ತಿಗೆ ಕಾರ್ಮಿ ಕರನ್ನು ಮುಂದುವರಸಬೇಕು, ಉದ್ಯಮದಲ್ಲಿ ಸುಮಾರು 120ಕ್ಕೂ ಹೆಚ್ಚು ಕಾರ್ಮಿಕರು ಮೂಲ ಉತ್ಪಾದನೆಗೆ ಸಂಬಂಧಿಸಿದ ಚಟುವಟಿಕೆ, ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹೆಲ್ಪರ್ಸ್, ಅಲ್ಲದೇ 80ಕ್ಕೂ ಹೆಚ್ಚು ಕೆಮಿಸ್ಟ್‌ಗಳು, ಆಪರೇ ಟರ್ಸ್, ಫಿಟ್ಟರ್‌ಗಳು ಸೇರಿ ತಾಂತ್ರಿಕ ಕೆಲಸಗಳ ನ್ನು ನಿರ್ವಹಿಸುತ್ತಿದ್ದೇವೆ ಎಂದರು.
ಪ್ರತಿಭಾ ಎಂಟರ್ ಪ್ರೈಸಸ್ ನ 5 ಜನ ಗುತ್ತಿಗೆ ಕಾರ್ಮಿಕರು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು,
ಕಂಪನಿಯಲ್ಲಿ ಇತರೆ ಕಂಪನಿಗಳು ಉತ್ಪಾದನೆ ಕೆಲಸಗಳನ್ನು ಸಹ ಕಾರ್ಮಿಕರಿಗೆ ನಿಯೋಜಿಸ ಲಾಗಿದೆ, ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ,
ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅನಧಿಕೃತ ನೀಡಬಾರದು ಎಂದು ಆಗ್ರಹಿಸಿದರು.
ಮೌಸ್ ಏಜೆನ್ಸಿ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಮತ್ತು ಇತರರಿಗೆ ಜುಲೈ ಆಗಸ್ಟ್ ತಿಂಗಳಿನಿಂದ ವೇತನ ಹೆಚ್ಚಳ ಮಾಡಬೇಕಿತ್ತು, ಮಾಡಿಲ್ಲ, ಇತರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮೀನಮೀಷ ಎಣಿಸುತ್ತಿದೆ ಎಂದರು.
ಈ ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವೀರೇಶ, ಉಪಾಧ್ಯಕ್ಷ
ಯಲ್ಲಪ್ಪ ನಾಮಾಲಿ, ಪ್ರಧಾನ ಕಾರ್ಯದರ್ಶಿ
ಜಿ.ಬಸವರಾಜ, ಸಂಘಟನಾ ಕಾರ್ಯದರ್ಶಿ
ಮಹೇಶ್ ಸಿ ಸೇರಿದಂತೆ ಅನೇಕರು ಇದ್ದರು.