ರಾಯಚೂರು: ನ.13-ಮಾನವಿ ತಾಲ್ಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ಆದರ್ಶ ಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ. 100% ರಷ್ಟು ಫಲಿತಾಂಶವು ಬರುವಂತೆ ನೋಡಿಕೊಳ್ಳಬೇಕೆಂದು ರಾಯಚೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ನೀರಮಾನವಿ ಗ್ರಾಮ ಪಂಚಾಯತಿಯ ಆದರ್ಶ ಶಾಲೆಯ 2024-25ನೇ ಸಾಲಿನ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ಹಮ್ಮಿಕೊಂಡು ತರಬೇತಿಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಶಿಕ್ಷಕರಿಗೆ ಫಲಿತಾಂಶಗಳ ಬಗ್ಗೆ ಮಾಹಿತಿ ಪಡೆದರು, ಇನ್ನೂ ಫಲಿತಾಂಶ ಹೆಚ್ಚಳಕ್ಕೆ ಯಾವ ರೀತಿ ಕ್ರಮ ಕೈಕೊಂಡಿದ್ದೀರಿ ಎಂಬ ಮಾಹಿತಿಯನ್ನು ಶಾಲಾವಾರು ಮಾಹಿತಿ ಪಡೆದು, ಶೇ. 100% ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶವು ಬರುವಂತೆ ಆದ್ಯತೆ ನೀಡಬೇಕು. ಈ ವರ್ಷ 75% ಕಡಿಮೆ ಪಲಿತಾಂಶ ಬಂದ ಶಾಲೆಗಳಿಗೆ ಕ್ರಮ ಜರುಗಿಸಲಾಗುವುದೆಂದು ಹಾಗೂ 10 ಮಕ್ಕಳಿಗೆ ಒಬ್ಬ ಶಿಕ್ಷಕರಾಗಿ ಜವಾಬ್ದಾರಿ ನೀಡಲು ಚಂದ್ರಶೇಖರ ಬಿಇಒ ರವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು, ಜಿಲ್ಲಾ ಮಟ್ಟದ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಅಕ್ಷರ ದಾಸೋಹ ವಿಭಾಗದ ಕೆ. ಪ್ರಭು ಕಣ್ಣನ್, ಕಾರ್ಯನಿರ್ವಾಹಕ ಅಧಿಕಾರಿಗಳು ಖಾಲೀದ್ ಅಹಮದ್, ಸಹಾಯ ನಿರ್ದೇಶಕರು ( ಪಂ ರಾ) ದೀಪಾ ಅರಳಿಕಟ್ಟಿ, ಬಿಇಒ ಚಂದ್ರಶೇಖರ, ಗ್ರಾ.ಪಂ ಪಿಡಿಒ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.