Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Feature ArticleLocal News

ಮಲಿಯಾಬಾದ್ನಲ್ಲಿ ಮತ್ತೆ ಚಿರತೆ ಭೀತಿ: ಗ್ರಾಮಸ್ಥರಲ್ಲಿ ಆತಂಕ

ಮಲಿಯಾಬಾದ್ನಲ್ಲಿ ಮತ್ತೆ ಚಿರತೆ ಭೀತಿ: ಗ್ರಾಮಸ್ಥರಲ್ಲಿ ಆತಂಕ

ರಾಯಚೂರು: ಮಲಿಯಾಬಾದ್ ಗ್ರಾಮದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಿದಾಡಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಈ ಭಾಗದಲ್ಲಿ ಚಿರತೆಯೊಂದು ಸೆರೆಹಿಡಿಯಲ್ಪಟ್ಟಿತ್ತು. ಆಗ ಜನರು ನಿಟ್ಟುಸಿರು ಬಿಟ್ಟ ಬೆನ್ನಲ್ಲೆ ಗುರುವಾರ ಬೆಳಿಗ್ಗೆ ಮತ್ತೊಮ್ಮೆ ಚಿರತೆ ಸಂಚಾರದ ಮಾತುಗಳು ಕೇಳಿ ಬರುತ್ತಿರುವುದರಿಂದ ಪರಿಸ್ಥಿತಿ ತೀವ್ರತೆಯ ಹಂತಕ್ಕೆ ತಲುಪಿದೆ.

ಗ್ರಾಮದ ಎಮ್ಮೆ ಕರುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೆ ಇದೀಗ ಚಿರತೆ ಭೀತಿ ಹೆಚ್ಚಾಗಿದ್ದು, ಕೆಲವು ರೈತರು ರಾತ್ರಿ ಹೊತ್ತಿಗೆ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಆಕಸ್ಮಿಕವಾಗಿ ಚಿರತೆಯ ಚಾಪುಗಳು ಕಂಡುಬAದಿವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಈ ವಿಷಯ ಗ್ರಾಮದಲ್ಲಿ ಹಬ್ಬಿದ ಕೂಡಲೇ ಜನರು ಭಯಭೀತರಾಗಿ ತಮ್ಮ ಮಕ್ಕಳನ್ನು ರಾತ್ರಿ ಹೊತ್ತಿಗೆ ಹೊರಗೆ ಬಿಡುವುದಿಲ್ಲ, ಸಾಕುಪ್ರಾಣಿಗಳನ್ನು ಪೂರ್ತಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾರೆ.

ಮಲಿಯಾಬಾದ್ ಬಳಿ ಇರುವ ಕಾಡಿನ ಗಡಿಭಾಗಗಳ ಸಮೀಪ ಇದು ಮೊದಲನೆಯ ಚಿರತೆ ದಾಳಿ ಅಲ್ಲ. ಕಳೆದ ಒಂದು ವರ್ಷದಲ್ಲಿ ಈ ಭಾಗದಲ್ಲಿ ಹಲವು ಬಾರಿ ಚಿರತೆಗಳು ಕಾಣಿಸಿಕೊಂಡಿದ್ದವು. ಈ ಭಾಗವು ತೀಕ್ಷ್ಣ ಅರಣ್ಯ ವಲಯಕ್ಕೆ ಸಮೀಪವಾಗಿರುವುದರಿಂದ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನ ಸೀಮಿತಗೊಂಡಿದೆ. ಅರಣ್ಯ ಇಲಾಖೆ ಈ ಭಾಗದಲ್ಲಿ ಸಾಕಷ್ಟು ಬಂಡಾಯಗಳನ್ನು ಪರಿಶೀಲಿಸುತ್ತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ತಕ್ಷಣದ ಪರಿಹಾರ ಸಿಗದೆ ಗ್ರಾಮಸ್ಥರಲ್ಲಿ ಆತಂಕ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಂವಾದ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಗ್ರಾಮದಲ್ಲಿ ಕಟ್ಟೆಚ್ಚರ ವಾತಾವರಣ ನಿರ್ಮಾಣವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಈ ಘಟನೆಗೆ ಸಂಬAಧಿಸಿದ ಹೆಚ್ಚಿನ ಮಾಹಿತಿ ಮತ್ತು ಚಿರತೆಯ ಚಲನಚಿತ್ರಣದ ಆಧಾರದಲ್ಲಿ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಈ ಬೆಳವಣಿಗೆಯ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಪ್ರಕಾರ, ಚಿರತೆ ಇಲ್ಲಿಯವರೆಗೆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಂಡಿರಬಹುದು, ಆದರೆ ಗ್ರಾಮಸ್ಥರು ಜಾಗರೂಕರಾಗಬೇಕಾಗಿದೆ. ಇದನ್ನತ್ತ ಗಮನಹರಿಸಿರುವ ಅರಣ್ಯ ಇಲಾಖೆ ಈಗಾಗಲೇ ಸ್ಥಳದಲ್ಲಿ ಟ್ರಾಪ್ ಕ್ಯಾಮರೆಗಳನ್ನು ಅಳವಡಿಸಲು ಪ್ರಾರಂಭಿಸಿದ್ದು, ಚಿರತೆಯ ಚಲನಚಲಿತವನ್ನು ಗಮನಿಸಿ ತಕ್ಷಣ ಕಾರ್ಯಗತಗೊಳಿಸಲಿದೆ.

ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಟ್ರಾಪ್ ಕ್ಯಾಮರೆಗಳೊಂದಿಗೆ ಪಾಟ್ರೋಲ್ ಬಲವನ್ನು ಹೆಚ್ಚಿಸಲಾಗಿದೆ. ಚಿರತೆಯನ್ನು ಸೆರೆಹಿಡಿಯಲು ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ಈ ನಡುವೆ, ಯಾರೂ ಅನಗತ್ಯವಾಗಿ ಕಾಡಿನ ಅಂಚಿಗೆ ಹೋಗಬಾರದು, ರಾತ್ರಿ ಹೊತ್ತಿಗೆ ಜಾಗರೂಕರಾಗಬೇಕು.

| ರಾಜೇಶ ನಾಯಕ, ವಲಯ ಅರಣ್ಯಾಧಿಕಾರಿ ರಾಯಚೂರು.

Megha News