ರಾಯಚೂರು. ರಾಯಚೂರು ಗ್ರಾಮೀಣ ಚಂದ್ರಬಂಡಾ ಶಾಖೆಯ ವಡವಟ್ಟಿ ಉಪ ಕೇಂದ್ರದ ವಿವಿಧ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿದೆ. ಈ ಪ್ರಯುಕ್ತ 2024ರ ಆ.11ರ ಬೆಳಿಗ್ಗೆ 09ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಡವಟ್ಟಿ ಮತ್ತು ಬಾಯಿದೊಡ್ಡಿ, ಕುರುಬದೊಡ್ಡಿ, ಕಡಗಮ್ದೊಡ್ಡಿ ಸ್ಟೇಜ್ ಮತ್ತು ಕಟ್ಲೆಟ್ಕೂರು ಸ್ಟೇಜ್, ಸಿಂಗನೋಡಿ ಮತ್ತು ಸಿಂಗನೋಡಿ ತಾಂಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ಗ್ರಾಮೀಣ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.