ರಾಯಚೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ವೆಂದು ನಾಮಕರಣವಾಗಿ 50 ವರ್ಷ ತುಂಬಿ ರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ್ಯಂತ ಕೈಗೊಂಡಿರುವ ರಥ ವನ್ನು ಸ್ವಾಗತಿಸಲು ತಹ ಶೀಲ್ ಕಾರ್ಯಾಲಯದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಕನ್ನಡಾಂಬೆಯ ರಥೋತ್ಸ ವವನ್ನು ರಾಯಚೂರು ನಗರಕ್ಕೆ ಸ್ವಾಗತಿಸಲು ನಿರ್ಣಯಿಸಲಾಯಿತು.
ದಿ 20 ರಂದು 3 ಗಂಟೆಗೆ 7 ಮೈಲ್ ಕ್ರಾಸ್ ಬಳಿ ಬಂದು ಸೇರುವುದು. ಇದನ್ನು ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಹಾಗೂ ನಗರಸಭೆ ವತಿಯಿಂದ ಸ್ವಾಗತಿಸಲಾ ಗುವುದು. ಈ ರಥೋತ್ಸವ ಕಾರ್ಯಕ್ರಮದಲ್ಲಿ
ವಿವಿಧ ಸಂಘಟನೆಗಳಿಂದ ಹಾಗೂ ಕನ್ನಡಪರ ಸಂಘ, ಸಂಸ್ಥೆಗಳಿಂದ ಸಾಹಿತ್ಯ ಆಸಕ್ತರಿಂದ ರಾಯಚೂರು ನಗರದಲ್ಲಿ ಕನ್ನಡಾಂಬೆಯ ರಥಕ್ಕೆ ಅದ್ದೂರಿ ಮೆರವಣಿಗೆಯನ್ನು ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
21 ರಂದು ಬೆಳಗ್ಗೆ 9 ಗಂಟೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಮೆರವಣಿಗೆ ಪ್ರಾರಂಭ ಗೊಂಡು ನಗರದ ಬಸವೇಶ್ವರ ಸರ್ಕಲ್ ಅಂ ಬೇಡ್ಕರ್ ಸರ್ಕಲ್ ಹಾಗೂ ತಹಶೀಲ್ ಕಾರ್ಯಾ ಲಯದ ಮುಂಭಾಗದಿಂದ ತೀನ್ಕಂದಿಲ್, ಪಟೇಲ್ ಚೌಕ್, ಚಂದ್ರಮೌಳೇಶ್ವರ ಸರ್ಕಲ್ ಕನಕದಾಸ ಸರ್ಕಲ್ ಮೂಲಕ ಯರಮರಸ್ ಗ್ರಾಮಕ್ಕೆ ಹೋಗುವುದು. ನಂತರ ದೇವಸು ಗೂರು ಗ್ರಾಮದ ಮೂಲಕ ಯಾದಗಿರಿ ಜಿಲ್ಲೆಗೆ ಪ್ರವೇಶ ಮಾಡಲಿದೆ.
ಈ ಸಭೆಯಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಮಹಿಬೂಬೀ, ತಹಸಿಲ್ದಾರ್ ಸುರೇಶ್ ವಮಾ೯, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ್ ಪವಾರ್, ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ್ ಹಾಗೂ ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.