ರಾಯಚೂರು,ಡಿ.೧೩- ಬಲಿಷ್ಟ ಸಮೂದಾಯ ಮೀಸಲಾತಿಯ ದುರ್ಬಳಕೆ ಮಾಡುವದು ಸಂವಿಧಾನ ಆಶಯಗಳಿಗೆ ಅಪಚಾರ ಮಾಡಿದಂತೆ.ಪಂಚಮಸಾಲಿ ಸಮಾಜ ಬಲಿಷ್ಟ ಸಮೂದಾಯವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಅವರಿಂದು ಭೇಟಿಯಾದ ಮಾಧ್ಯಮ ಗಳೊಂದಿಗೆ ಮಾತನಾಡಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಬೇಕೆ ಹೊರತು ಬಲಿಷ್ಟ ಸಮೂದಾಯಗಳಿಗೆ ಅಲ್ಲ. ಆದರೆ ಪಂಚಮ ಸಾಲಿ ಸ್ವಾಮೀಜಿ ಹಿಂಸಾತ್ಮಕ ಹೋರಾಟ ಪ್ರಚೋದಿಸಬಾರದು. ಕ್ರಾಂತಿಕಾರಿ ಬಸವಣ್ಣ ಸ್ಥಳ ಕೂಡಲ ಸಂಗಮ ಸ್ವಾಮೀಜಿ ಎಂದು ಸಹ ಅವರು ಕರೆದುಕೊಳ್ಳಬಾರದು ಎಂದರು. ಪಂಚನಸಾಲಿ ಸ್ವಾಮೀಜಿ ರಾಜಕಾರಣಿಯಂತೆ ಸಮೂದಾಯದ ನಾಯಕತ್ವ ವಹಿಸಿಕೊಳ್ಳಲು ಹೊರಟಿದ್ದಾರೆ ಎಂದರು.
ದೇಶದಲ್ಲಿ ಒಂದು ಚುನಾವಣೆ, ಒಂದು ಭಾಷೆ ಪರಿಕಲ್ಪನೆ ತಪ್ಪು. ದ್ರಾವಿಡ ಸಂಸ್ಕೃತಿಯಲ್ಲಿ ಅನೇಕ ಬಾಷಿಕರು, ಕಲೆ ಸಂಸ್ಕ್ರತಿಯಿದೆ. ಹಿಂದಿ ಭಾಷೆ ಹೇರುವದರಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ.ಅದೇ ರೀತಿ ದೇಶದಾದ್ಯಂತ ಚುನಾವಣೆಯೂ ಸಾಧ್ಯವಿಲ್ಲ ಪ್ರಾದೇಶಿಕ ಪಕ್ಷಗಳ ಧ್ವನಿ ಕಳೆದುಕೊಳ್ಳುತ್ತವೆ ಚುನಾವಣಾ ನ್ಯೂನತೆಗಳು ಹೆಚ್ಚಳವಾಗಬಹುದು ಎಂದು ವಿರೋಧ ವ್ಯಕ್ತಪಡಿಸಿದರು.
Megha News > State News > ಪಂಚಮಸಾಲಿ ಸಮೂದಾಯದ ಮೀಸಲಾತಿ ಹೋರಾಟಕ್ಕೆ ಸಾಹಿತಿ ಕುಂ.ವೀರಭದ್ರಪ್ಪ ವಿರೋಧ
ಪಂಚಮಸಾಲಿ ಸಮೂದಾಯದ ಮೀಸಲಾತಿ ಹೋರಾಟಕ್ಕೆ ಸಾಹಿತಿ ಕುಂ.ವೀರಭದ್ರಪ್ಪ ವಿರೋಧ
Tayappa - Raichur13/12/2024
posted on
Leave a reply