ರಾಯಚೂರು. ಒಣ ಮೆಣಸಿನಕಾಯಿ ಸುಗ್ಗಿ ಕಾಲವಾಗಿದ್ದರಿಂದ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ಡಿ.20 ರಿಂದ ಪ್ರತಿ ಬುಧವಾರ ಮತ್ತು ಪ್ರತಿ ಶನಿವಾರ ದಂದು ಇ-ಟೆಂಡರ್ ಮೂಲಕ ಹಿಂದಿನ ವರ್ಷದಂತೆ ಪ್ರಾರಂಭಿಸಲಾಗುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಒಣ ಮೆಣಸಿನಕಾಯಿ ಬೆಳೆದ ರೈತರು, ಈ ಸಮಿತಿಯಿಂದ ಲೈಸೆನ್ಸ್ ಪಡೆದ ಒಣ ಮೆಣಸಿನಕಾಯಿ ವರ್ತಕರು ಟೆಂಡರ್ ನಲ್ಲಿ ಭಾಗವಹಿಸಿ ವ್ಯವಹರಿಸಬಹುದಾಗಿದೆ.
ಟೆಂಡರ್ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ನಡೆಯುತ್ತದೆ.
ರೈತರು ಒಣ ಮೆಣಸಿನಕಾಯಿ ಉತ್ಪನ್ನ ನೀರು ಸಿಂಪಡಣೆ ಮಾಡದೇ ಮಾರಾಟಕ್ಕೆ ತಂದಲ್ಲಿ ಸೂಕ್ತ ಬೆಲೆ ಸಿಗುತ್ತದೆ, ರೈತರು ನೀರು ಸಿಂಪಡಣೆ ಮಾಡಬಾರದು ಇದರಿಂದ ಬೆಲೆ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಸಮಿತಿಯ ಖರೀದಿ ಲೈಸೆನ್ಸ್ ಪಡೆದ ವರ್ತಕರಿಗೆ ಮಾತ್ರ ಟೆಂಡರ್ ಫಾರಂ ನೀಡಲಾಗುತ್ತದೆ, ಲೈಸೆನ್ಸ್ ಇಲ್ಲದವರಿಗೆ ಟೆಂಡರ್ ಫಾರಂ ನೀಡಿದಲ್ಲಿ ಹಣ ಪಾವತಿ ವಿಷಯದಲ್ಲಿ ಸಂಭಂದಿಸಿದ ದಲ್ಲಾಲರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ, ಆದ್ದರಿಂದ ಲೈಸೆನ್ಸ್ ಇರುವ ಬಗ್ಗೆ ಖರೀದಿದಾರಿಂದ ಖಾತರಿಪಡಿಸಿಕೊಳ್ಳುವುದು ದಲ್ಲಾಲರ ಜವಾಬ್ದಾರಿಯಾಗಿದೆ, ಒಣ ಮೆಣಸಿನಕಾಯಿ ಉತ್ಪನ್ನ ಮಾರಾಟದ ನಂತರ ತಕ್ಷಣವೇ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.