ರಾಯಚೂರು. ಕಳೆದ ವರ್ಷ ಬರಗಾಲದಿಂದ ತತ್ತರಿಸಿರುವ ರೈತರಿಂದ ಮಳೆಗಾಗಿ ಸಪ್ತ ಭಜನೆ ಮಾಡಲಾಯಿತು.
ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದ ಶರಣ ರಾಚಯಪ್ಪ ತಾತ ಗದ್ದುಗೆಯ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರು ಇಂದಿನಿಂದ ಸಪ್ತ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರಾಜ್ಯದಲ್ಲಿ ಒಂದೆಡೆ ಅತೀವೃಷ್ಠಿ ಉಂಟಾಗಿದ್ದು, ಮತ್ತೊಂದೆಡೆ ಮಳೆಗಾಗಿ ಪೂಜೆ ಸಲ್ಲಿಸಲಾ ಗುತ್ತದೆ.
ಜಾಗಟಗಲ್ ಗ್ರಾಮದಲ್ಲಿ ಏಳು ದಿನಕಾಲ ಸತತ ವಾಗಿ ಭಜನೆಯನ್ನು ಭಕ್ತರು ನಡೆಸುತ್ತಿ ದ್ದಾರೆ. ಆರು ತಂಡಗಳಿಂದ ನಿರಂತರವಾಗಿ ಹಗಲು ರಾತ್ರಿ
ನಡೆಸಲಾಗುತ್ತದೆ. ಪ್ರತಿ ತಂಡದಲ್ಲಿ ಏಳು ಜನ ರಿಂದ ಶಿವನಾಮ ಸ್ಮರಣೆ ಮಾಡುವ ಮೂಲಕ
ಅತೀವೃಷ್ಠಿ, ಅನಾವೃಷ್ಠಿಗಳಾಗದೆ ಉತ್ತಮ ಮಳೆ ಬರಲಿ ಎಂದು ರೈತರ ಪ್ರಾರ್ಥಿಸುತ್ತಿದ್ದಾರೆ.