ಮುದಗಲ್. ಕೊಠಡಿಯಲ್ಲಿ ಅಳವಡಿದ್ದ ಎರ್ ಕೂಲರ್ (ಎಸಿ)ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡು ಎಸಿ ಸುಟ್ಟುಹೋಗಿರುವ ಘಟನೆ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಎರ್ ಕೂಲರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ವೇಳೆ ಸ್ಥಳದಲ್ಲಿ ವೈದ್ಯರು ಹೊರಬಂದಿದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ,
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ
ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿತ್ತು. ಈ ವೇಳೆ ಎಸಿಗೆ ಅಳವಡಿಸಿ ವೈರ್ ತೆಗೆಯುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕೊಠಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ತಯಾರಿ ಮಾಡಿಕೊ ಳ್ಳುವ ವೇಳೆ ಎರ್ ಕೂಲರ್(ಎಸಿ)ನಲ್ಲಿ ಶಾರ್ಟ್ ಸರ್ಕ್ಯೂಟ್ಆಗಿ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಹಬ್ಬಿದೆ.
ಇಂದು ನಡೆಯಬೇಕಿದ್ದ ನೇತ್ರ ಶಸ್ತ್ರಚಿಕಿತ್ಸೆಯನ್ನು ರದ್ದುಗೊಳಿಸಿ ನವಂಬರ್ 3 ಮತ್ತು 4ಕ್ಕೆ ಮುಂ ದೂಡಲಾಗಿದೆ ಎಂದು ದಿವ್ಯ ದೃಷ್ಟಿ ಪೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ ಅವರು ತಿಳಿಸಿದ್ದಾರೆ.