ರಾಯಚೂರು: ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಥಮ ಹಂತದ ಸೈಟ್ ಕ್ಲಿಯರೆನ್ಸ್ ಗೆ ಅನೇಕ ತೊಡಕುಗಳಿದ್ದರಿಂದ ಕಾಮಗಾರಿ ಪ್ರಾರಂಭಿಸಲು ಸೈಟ್ ಕ್ಲಿಯರೆನ್ಸ್ ಪ್ರಮಾಣ ಪತ್ರದ ಅನುಮತಿಯ ಅಗತ್ಯವಿತ್ತು. ಈ ವೇಳೆ ರಾಯಚೂರು, ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಎರಡು ಬಾರಿ ಭೇಟಿಯಾಗಿ ವಿಮಾನ ನಿಲ್ದಾಣ ಕಾಮಗಾರಿಯ ಪ್ರಕ್ರಿಯೆ ತ್ವರಿತಗೊಳಿಸಿ ಅಗತ್ಯ ಕ್ರಮ ಕೈಗೊಂಡು ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸುದೀರ್ಘವಾಗಿ ಚರ್ಚಿಸಿ ವಾಸ್ತವ ಸ್ಥಿತಿ-ಗತಿ ಮನವರಿಕೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸೈಟ್ ಕ್ಲಿಯರೆನ್ಸ್ ಬಗ್ಗೆ ದಾಖಲೆಗಳನ್ನು ಪಡೆದ್ದು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಯೋಜನಾ ವರದಿ ಕೇಳಿದ ಹಿನ್ನೆಲೆಯಲ್ಲಿ ಸಂತಸದ ಮೂಡಿಸಿದೆ ಎಂದು ಸಂಸದ ಜಿ.ಕುಮಾರ ನಾಯಕ ಅವರು ಸಂತಸ ವ್ಯಕಪಡಿಸಿದ್ದಾರೆ.
Megha News > Local News > ವಿಮಾನ ನಿಲ್ದಾಣಕ್ಕೆ ಸೈಟ್ ಕ್ಲಿಯರೆನ್ಸ್ ಪ್ರಮಾಣ ಪತ್ರ, ಸಂಸದ ಜಿ.ಕುಮಾರ ನಾಯಕ ಸಂತಸ