Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ಜೆಸ್ಕಾಂನಿಂದ ಗ್ರಾಹಕರಿಗೆ ಎಸ್‌ಎಂಎಸ್‌ ಸೇವೆ ಆರಂಭ

ಜೆಸ್ಕಾಂನಿಂದ ಗ್ರಾಹಕರಿಗೆ ಎಸ್‌ಎಂಎಸ್‌ ಸೇವೆ ಆರಂಭ

ರಾಯಚೂರು, ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)ವು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್‌ ಸಂಬಂಧಿತ ಸಮಸ್ಯೆಗಳನ್ನು ದಾಖಲಿಸಿ ಬಗೆಹರಿಸಲು ಗ್ರಾಹಕ ಸೇವಾ ಕೇಂದ್ರದ ಟೋಲ್‌ ಫ್ರೀ ಸಹಾಯವಾಣಿ, ವಾಟ್ಸ್‌ಆ್ಯಪ್‌ ಸಹಾಯವಾಣಿಯೊಂದಿಗೆ ಇದೀಗ ಎಸ್‌ಎಂಎಸ್‌ ಸೇವೆಯನ್ನು ಆರಂಭಿಸಿದೆ.

ಗ್ರಾಹಕರು, ವಿದ್ಯುತ್‌ ಸರಬರಾಜು ಅಡಚಣೆ, ಡಿಟಿಸಿ ವೈಫಲ್ಯ, ಬಿಲ್‌ ಪಾವತಿ ಇತ್ಯಾದಿ ವಿದ್ಯುತ್‌ ಸಂಬಂಧಿತ ದೂರುಗಳನ್ನು 9769368959 ಕ್ಕೆ ಎಸ್‌ಎಂಎಸ್‌ ಮೂಲಕ ದಾಖಲಿಸಬಹುದಾಗಿದೆ.
ಗ್ರಾಹಕ ಸೇವಾ ಕೇಂದ್ರದಲ್ಲಿ ಸ್ವೀಕರಿಸಿದ ದೂರನ್ನು ಪಿಜಿಆರ್‌ಎಸ್‌ (ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ) ಸಾಫ್ಟ್‌ವೇರ್‌ನಲ್ಲಿ ತಕ್ಷಣವೇ ನೋಂದಾಯಿಸಲಾಗುತ್ತದೆ ಮತ್ತು ಡಾಕೆಟ್‌ ಸಂಖ್ಯೆಯನ್ನು ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಕಳುಹಿಸಲಾಗುತ್ತದೆ.
ಜತೆಗೆ ದೂರು ಪರಿಹರಿಸಲು ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಲಾಗುತ್ತದೆ. ಸರ್ವೀಸ್‌ ಸ್ಟೇಷನ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ. ದೂರು ಪರಿಹರಿಸಿದ ನಂತರ ಗ್ರಾಹಕರಿಂದ ಧೃಢೀಕರಣ ಪಡೆದು ದೂರನ್ನು ಅಂತ್ಯಗೊಳಿಸಲಾಗುತ್ತದೆ. ಗ್ರಾಹಕರು ತಮ್ಮ ದೂರಿನ ಸ್ಥಿತಿಯನ್ನು ವೆಬ್‌ಸೈಟ್‌ http://pgrs.pragyaware.com/Home.aspx ಮೂಲಕವೂ ಟ್ರ್ಯಾಕ್‌ ಮಾಡಬಹುದಾಗಿದೆ.
ವಿದ್ಯುತ್‌ ಸಂಬಂಧಿತ ಯಾವುದೇ ಸಮಸ್ಯೆಗೆ 24X7 ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಿ ಅಥವಾ ಸಹಾಯವಾಣಿ ಸಂಖ್ಯೆ 9769368959 ಕ್ಕೆ ಎಸ್‌ಎಂಎಸ್‌ ಕಳುಹಿಸಬಹುದು. ಜತೆಗೆ ವಾಟ್ಸ್‌ಆ್ಯಪ್‌ ಸಹಾಯವಾಣಿ ಸಂಖ್ಯೆ 9480847593 ಕ್ಕೆ ಅಪಾಯಕಾರಿ ಸ್ಥಳಗಳನ್ನು ಕಂಡಕೂಡಲೇ ಆ ಸ್ಥಳದ ಫೋಟೋ ಮತ್ತು ವಿಡೀಯೊ ತೆಗೆದು ಸ್ಥಳದ ವಿವರಗಳೊಂದಿಗೆ ಹಂಚಿಕೊಳ್ಳಿ. ಜೆಸ್ಕಾಂ ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತದೆ. ಜತೆಗೆ ಸ್ಥಳಿಯ ಸೇವಾ ಕೇಂದ್ರಗಳು ಮತ್ತು ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳ ಪಟ್ಟಿ ಜೆಸ್ಕಾಂ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

Megha News