ರಾಯಚೂರು. ನಗರದ ಎಸ್‌ಎನ್‌ಟಿ ಟಾಕೀಸ್‌ನ್ನು ಕೆಡವಿ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಹಿಂಭಾಗದಲ್ಲಿ ಕಂದಕವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾ ಮಾಡುತ್ತಿದ್ದು, ಕಟ್ಟಡ ಪರವಾನಗಿ ರದ್ದುಗೊಳಿಸಿ ನಗರಸಭೆ ಆಯುಕ್ತ ಗುರುಸಿದ್ದಯ್ಯ ಹಿರೇಮಠ ಅವರು ಆದೇಶಿಸಿದ್ದಾರೆ.
ಎಸ್‌ಎಟಿ ಟಾಕೀಸ್ ಕೆಡವಿದ್ದು ಮಾಂಗಲ್ಯ ಸಂಸ್ಥೆಗೆ ನೀಡಿದೆ, ಕಟ್ಟಡ ಪರವಾನಿಗೆಯನ್ನು ನಗರಸಭೆ ರದ್ದುಗೊಳಿಸಿದೆ,
ಸರ್ಕಾರಿ ವಸ್ತು ಸಂಗ್ರಹಾಲಯ ಕ್ಯುರೇಟರ್ ಇವರು ನೀಡಿದ ಪತ್ರದ ಅನ್ವಯ ಎಸ್ ಎನ್ ಟಿ ಟಾಕೀಸ್ ನಿರ್ಮಾಣ ಮಾಡುತ್ತಿರುವ ಕಟ್ಟಡ ಐತಿಹಾಸಿಕ ಕೋಟೆ ಕಂದಕವನ್ನು ಅತಿಕ್ರಮಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ನವರಂಗ್ ದರ್ವಾಜಾ ಸ್ಮಾರಕದಿಂದ ನೈರುತ್ಯಕ್ಕೆ 209. 49 ಮೀಟರ್ ಅಂತರದಲ್ಲಿದ್ದು ಸ್ಮಾರಕ ನಿಯಂತ್ರಿತ ಪ್ರದೇಶ ವ್ಯಾಪ್ತಿಗೆ ಸೇರಿದೆ, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಹಾಗೂ ಅವಶೇಷ ಕಾಯ್ದೆಗಳ 1961 ನಿಯಮ 1965ರ ಉಲ್ಲಂಘನೆಯಾಗಿದ್ದರಿಂದ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಯಾವುದೇ ದಿಕ್ಕಿನಿಂದ 100 ಮೀಟರ್ ಅಂತರ ನಿಷೇಧಿತ ಪ್ರದೇಶವಾಗಿದ್ದು ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಕಾರಣ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ ಪರವಾನಿಗೆ ರದ್ದುಗೊಳಿಸಿ ಆದೇಶದಲ್ಲಿ ತಿಳಿಸಿದ್ದಾರೆ.