ರಾಯಚೂರು,ಮೇ.೧೬- ಪರಿಶಿಷ್ಟ ಜಾತಿಗಳ ಒಳ ಮೀಸಲು ಗಣತಿಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗುರು ತಾಲೂಕಿನ ಹೆಗ್ಗಾಪುರ ತಾಂಡಾ ಶಿಕ್ಷಕ ಸೋಮಪ್ಪ ಎಂಬುವರನ್ನು ಅಮಾನತ್ ಗೊಳಿಸಿ ಜಿಲ್ಲಾಧಿಕಾರಿ ಕೆ.ನಿತೀಶ ಅದೇಶಿಸಿದ್ದಾರೆ.
ಮೇ.೫ ರಿಂದ ೨೩ ವರೆಗೆ ನಡೆಯುತ್ತಿರುವ ಗಣತಿ ಕಾರ್ಯಕ್ಕೆ ನಾಗಲಾಪುರ ಗ್ರಾಮ ಪಂಚಾಯತಿಯ ಹೆಗ್ಗಾಪುರ ತಾಂಡಾ ಶಿಕ್ಷಕ ಸೋಮಪ್ಪ ಇವರನ್ನು ನಿಯುಕ್ತಿಗೊಳಿಸಲಾಗಿತ್ತು.ಗಣತಿಯಲ್ಲಿ ಲಂಬಾಣಿ ಸಮೂದಾಯ ಜನರನ್ನು ಆದಿ ದ್ರಾವಿಡ ಎಂದು ನಮೂದಿಸಿರುವ ಕುರಿತು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ನೀಡಿದ ದೂರಿನ ಮೇರೆಗೆ ತಹಸೀಲ್ದಾರ ತನಿಖೆ ನಡೆಸಿದಾಗ ಲೋಪ ಆಗಿರುವದು ಬೆಳಕಿಗೆ ಬಂದಿದೆ. ಈ ಕುರಿತು ನ್ಯಾಯಮೂರ್ತಿ ನಾಗಮೋಹನ ದಾಸ ಎಕ ಸದಸ್ಯ ಆಯೋಗವೂ ನೋಟಿಸ್ ನೀಡಿದೆ. ಕರ್ತವ್ಯ ಲೋಪದ ಆರೋಪ ಮೇಲೆ ಶಿಕ್ಷಕ ಸೋಮಪ್ಪ ಇವರನ್ನು ಅಮಾನತ್ ಗೊಳಿಸಿ ಆದೇಶಿಸಿದ್ದಾರೆ.